
ಮೋಡಗಳನ್ನು ಶೋಧಿಸುವಂತೆ ತುಂಬಾ ಮೇಲೆ ಹಾರುತ್ತಿದ್ದರೂ ಈ ಹಕ್ಕಿಯನ್ನು ಪತ್ತೆಹಚ್ಚುವುದು ಕಷ್ಟವೇನಲ್ಲ. ಇದಕ್ಕೆ ಕಾರಣ ಮಧ್ಯಮ ಗಾತ್ರದ ಈ ಹಕ್ಕಿಗೆ ಇರುವ ಬಿಳಿ ತಲೆ. ಇದರ ಕೊಕ್ಕಿನ ಬಣ್ಣ ಕ್ರೀಮ್. ಎದೆ, ರೆಕ್ಕೆಗಳು ಹಾಗೂ ಬಾಲ ಹೊಳೆಯುತ್ತವೆ. ಬಾಲದ ತುದಿಯಲ್ಲಿ ಬಿಳಿ ಬಣ್ಣವಿದ್ದು, ರೆಕ್ಕೆಗಳ ಅಂಚು ಮಾತ್ರ ಕಪ್ಪು ಬಣ್ಣದ್ದಾಗಿವೆ.
ಬ್ರಾಹ್ಮಿ ಕೈಟ್ಸ್ ಕಪ್ಪು ಕೈಟ್‌ಗಳಂತೆಯೇ ಅಲೆಮಾರಿ ಹಕ್ಕಿಗಳು. ಮೃತ ಪ್ರಾಣಿಗಳ ಮಾಂಸ ತಿನ್ನುವುದಕ್ಕೆ ಇವು ಹಿಂದೇಟು ಹಾಕುವುದಿಲ್ಲ. ಬೇರೆ ಕೈಟ್ ಪ್ರಭೇದದ ಹಕ್ಕಿಗಳಂತೆ ಇವು ಗುಂಪು ಗುಂಪಾಗಿ ಹೆಚ್ಚು ಹಾರಾಡುವುದಿಲ್ಲ. ಸಮುದ್ರ, ನದಿ, ಕೊಳ ಮೊದಲಾದ ನೀರಿನ ಮೂಲಗಳಲ್ಲಿಯೂ ಇವು ಬೇಟೆಗಾಗಿ ಹೊಂಚು ಹಾಕುತ್ತವೆ. ಮೀನು ಹಿಡಿಯುವುದರಲ್ಲಿ ಇವು ನಿಸ್ಸೀಮ ಹಕ್ಕಿಗಳು.
ತಮಾಷೆ: ಹಿಂದೂಗಳ ನಂಬಿಕೆಯಲ್ಲಿ ಬ್ರಾಹ್ಮಿ ಕೈಟ್ ಎಂದರೆ ಗರುಡ. ಇದು ವಿಷ್ಣುವಿನ ವಾಹನ. ‘ಬ್ರಾಹ್ಮಿ’ ಎಂಬ ಪದವು ಪವಿತ್ರವಾದ ಕಿತ್ತಳೆಗೆಂಪು ಬಣ್ಣವನ್ನು ಸೂಚಿಸುತ್ತದೆ. ‘ಹಲಿಯಾಸ್ತುರ್’ ಎಂಬ ಲ್ಯಾಟಿನ್ ಹೆಸರೂ ಈ ಹಕ್ಕಿಗೆ ಇದ್ದು, ‘ಸಮುದ್ರ, ನದಿ ಪ್ರದೇಶಗಳ ಅಲೆಮಾರಿ’ ಎಂಬ ಅರ್ಥವನ್ನು ಈ ಪದ ಕೊಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.