
ತಟಪಟ ಹನಿ
ತೊಟ್ಟಿಕ್ಕಿತು ಎಂದರೆ
ಶುರುವಾಯಿತು
ಮಳೆಗಾಲದ ತೊಂದರೆ!
ಇಂದಿರೆ ಚಂದಿರೆ
ಬನ್ನಿರಿ ಎಲ್ಲರು
ತನ್ನಿರಿ ಚಂದದ
ಕೊಡೆಗಳನು
ಕೊಡೆಗಳು ನಮಗೆ
ಬೇಕೇ ಬೇಕು
ಮಳೆಗಾಲದ ಈ
ಅವಧಿಯಲಿ....
ಕೊಡೆಗಳ ಕೊಳ್ಳದ
ಬಡವರಿಗುಂಟು
ಗೋಣಿಗೊಬರು
ಪ್ಲಾಸ್ಟಿಕ್ ಕವರು!
ಕೊಡೆಗಳ ಹಾಗೆ
ಇವುಗಳು ಕೂಡಾ
ತಡೆದವು ಸುರಿವಾ
ಮಳೆಯಾ ‘ಷವರು’!
ಭೋರ್ ಭೋರೆಂದು
ಬೀಸುವ ಗಾಳಿಗೆ
ಟೊಪ್ಪಿಗೆ ಕೊಡೆಗಳು
ದಿಕ್ಕಾಪಾಲು!
ಗುಡುಗಿಗೆ ಸಿಡಿಲಿಗೆ
ಮಿಂಚುವ ಮಳೆಗೆ
ಎದೆಯೂ ಬಡಿತವು
ಡವ ಡವ ಡೋಲು!
ದುಮುಜುಮು
ಬೀಸುವ ಕೊರೆಯುವ ಗಾಳಿ
ಪ್ರತಿ ಮರ ತಲೆಯೂ
ತೂಗುವ ಕಾಳಿ!
ಆಗಸದೊಳಗಡೆ
ಕಾರ್ಮೋಡದ ಸಂತೆ
ಏನೋ ಆಗುವ
ಭೀತಿಯ ಚಿಂತೆ!
ಮಳೆಗಾಲವೊ ಇದು
ಕಡೆಗಾಲವೊ ಎಂಬ
ಧರಗುಟ್ಟಿಸೊ ಭೀತಿ
ಬೆಂಬಿಡದಿದೆ – ಇದು ಬ್ರಹ್ಮೋತಿ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.