ADVERTISEMENT

ಮುಸ್ಸಂಜೆ ಹಕ್ಕಿಯ ನೋವು

ಚಂದ ಪದ್ಯ

ಅಮರ್ತ್ಯ ಸಿದ್ಧಾರ್ಥ
Published 7 ಸೆಪ್ಟೆಂಬರ್ 2013, 19:59 IST
Last Updated 7 ಸೆಪ್ಟೆಂಬರ್ 2013, 19:59 IST

ಮುಸ್ಸಂಜೆ ಬಾನು ಕೆಂಪಾಗಿ
ಸೂರ್ಯ ಮನೆ ಸೇರುವಾಗ
ಹಕ್ಕಿಯೊಂದು ತನ್ಮನೆಗೆ ಹೋಗುತ್ತಿತ್ತು
ತನ್ನ ಕರುಳ ಕುಡಿಯ
ನೆನೆದು ಸಂತಸದಿಂದ
ನೆನೆನೆನೆದು ನಗುನಗುತ
ಖುಷಿ ಖುಷಿಯಾಗಿ ಹಾರುತ್ತಿತ್ತು

ಬಾಯ್ತುಂಬ ಹುಳ ಹುಪ್ಪಟೆ
ಕಂದನಿಗೆ ಕೊಡುವ ಹಂಬಲದಿಂದ
ಪ್ರೀತಿಯ ಮಮಕಾರ ಕಣ್ಣಲ್ಲಿ
ತುಂಬಿಕೊಂಡು ಆನಂದದಿಂದ ಹಾರುತ್ತಿತ್ತು
ಮಮಕಾರಕ್ಕಿಂದು ಬೆಲೆ ಇಲ್ಲೆಂಬಂತೆ
ಮರಿಯು ಹೊರ ಬಂದಿತ್ತು
ಅಲ್ಲೇ ಇದ್ದೊಂದು ದುಷ್ಟ ಸರ್ಪಕೆ
ಸಮಯ ಸಿದ್ಧಿಸಿತ್ತು
ಹಕ್ಕಿ ಗೂಡ ಸೇರಿತ್ತು
ಆದರೆ ಅಲ್ಲಿ ಬರೀ ನೋವಿತ್ತು.

–-ಅಮರ್ತ್ಯ ಸಿದ್ಧಾರ್ಥ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.