ADVERTISEMENT

ಮೊದಲ ಕ್ರಿಸ್‌ಮಸ್ ಕಾರ್ಡ್

​ಪ್ರಜಾವಾಣಿ ವಾರ್ತೆ
Published 28 ಜುಲೈ 2012, 19:30 IST
Last Updated 28 ಜುಲೈ 2012, 19:30 IST
ಮೊದಲ ಕ್ರಿಸ್‌ಮಸ್ ಕಾರ್ಡ್
ಮೊದಲ ಕ್ರಿಸ್‌ಮಸ್ ಕಾರ್ಡ್   

ಕ್ರಿಸ್‌ಮಸ್ ಕಾರ್ಡನ್ನು ಮೊದಲು ಸಿದ್ಧಪಡಿಸಿದ್ದು ಯಾರು?
ಮೊದಲ ಕ್ರಿಸ್‌ಮಸ್ ಕಾರ್ಡ್ ವಿನ್ಯಾಸಗೊಳಿಸಿದ್ದು ಕಲಾವಿದ ಜಾನ್ ಕ್ಯಾಲ್ಕೊಟ್ ಹಾರ್ಸ್‌ಲಿ. 1843ರಲ್ಲಿ ಸ್ನೇಹಿತ ಹೆನ್ರಿ ಕೋಲ್ ಅದಕ್ಕೆ ಸಾಥ್ ನೀಡಿದ. ಚಿತ್ರ ಕಲಾವಿದ ಕ್ಯಾಲ್ಕೊಟ್ ವಿನ್ಯಾಸ ಮಾಡಿದ ಕಾರ್ಡ್‌ಗಳ ನೂರು ಪ್ರತಿಯನ್ನು ಹೆನ್ರಿ ಕೋಲ್ ಮುದ್ರಿಸಿದ. ಇಷ್ಟೊಂದು ಕ್ರಿಸ್‌ಮಸ್ ಕಾರ್ಡ್‌ಗಳು ಮೊದಲು ಮುದ್ರಗೊಂಡಿದ್ದೇ ಆಗ.

ಕಾರ್ಡ್‌ನಲ್ಲಿ ಏನೇನು ಸಂಗತಿಗಳಿದ್ದವು?
13 ಸೆಂ.ಮೀ. ಉದ್ದ, 8 ಸೆಂ.ಮೀ. ಅಗಲದ ಆ ಕಾರ್ಡ್‌ನಲ್ಲಿ ಪೇಂಟ್ ಮಾಡಲಾದ ಮೂರು ಭಾಗಗಳಿದ್ದವು. ಮಧ್ಯದ ಭಾಗದಲ್ಲಿ ಕುಟುಂಬವೊಂದು ಸಂಭ್ರಮದಿಂದ ಕ್ರಿಸ್‌ಮಸ್ ಆಚರಿಸುವ ಚಿತ್ರವಿತ್ತು. ಉಳಿದೆರಡು ಭಾಗಗಳಲ್ಲಿ ಹಸಿದವರಿಗೆ ಅನ್ನ ನೀಡುವ, ಬೆತ್ತಲೆ ಇದ್ದವರಿಗೆ ಬಟ್ಟೆಗಳನ್ನು ನೀಡುವ ದಾನಿಗಳ ಚಿತ್ರಗಳಿದ್ದವು. `ಎ ಮೆರ‌್ರಿ ಕ್ರಿಸ್‌ಮಸ್ ಅಂಡ್ ಹ್ಯಾಪಿ ನ್ಯೂ ಇಯರ್ ಟು ಯೂ~ ಎಂಬ ಬರಹ ಕೂಡ ಕಾರ್ಡ್‌ನಲ್ಲಿತ್ತು.

ಅಧಿಕೃತವಾಗಿ ಮೊದಲ ಕ್ರಿಸ್‌ಮಸ್ ಕಾರ್ಡ್ ಕಳುಹಿಸಿದ್ದು ಯಾರು?
ಇಂಗ್ಲೆಂಡ್‌ನ ವಿಕ್ಟೋರಿಯಾ ರಾಣಿ 1840ರಲ್ಲಿ ಕ್ರಿಸ್‌ಮಸ್ ಕಾರ್ಡ್‌ಗಳನ್ನು ಕಳುಹಿಸುವ ಸಂಪ್ರದಾಯ ಶುರುಮಾಡಿದರು. ಪ್ರತಿಷ್ಠಿತ ಕುಟುಂಬಗಳು ಈಗಲೂ ಕ್ರಿಸ್‌ಮಸ್ ಕಾರ್ಡ್‌ಗಳನ್ನು ಆಪ್ತರಿಗೆ ಕಳುಹಿಸುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿವೆ.

ವಿಶ್ವದ ಅತಿ ಬೆಲೆ ಬಾಳುವ ಕ್ರಿಸ್‌ಮಸ್ ಕಾರ್ಡ್ ಯಾವುದು?
2000ದಲ್ಲಿ ಹಾರ್ಸ್‌ಲಿ ಪ್ರಕಟಿಸಿದ್ದ ಕಾರ್ಡ್‌ನ ಮೂಲ ಪ್ರತಿಯನ್ನು 20,250 ಪೌಂಡ್ (ಅಂದಾಜು 16 ಲಕ್ಷ) ಕೊಟ್ಟು ಖರೀದಿಸಿದ. ಇದುವರೆಗಿನ ಅತಿ ದುಬಾರಿ ಕ್ರಿಸ್‌ಮಸ್ ಕಾರ್ಡ್ ಅದೇ. ವಿಕ್ಟೋರಿಯಾ ರಾಣಿಯ ಮೆಚ್ಚಿನ ಕವಿ ಹೆಲೆನ್ ಎಂ.ಬರ್ನ್‌ಸೈಡ್ ಕ್ರಿಸ್‌ಮಸ್ ಕಾರ್ಡ್‌ಗಳಿಗೆಂದೇ ಆರು ಸಾವಿರ ಕಿರುಪದ್ಯಗಳನ್ನು ಅವರು ಬರೆದಿದ್ದರು. 1874ರಿಂದ 1900ರ ಅವಧಿಯಲ್ಲಿ ಅವರು ಈ ಪದ್ಯಗಳನ್ನು ಬರೆದರು. `ಕ್ರಿಸ್‌ಮಸ್ ಕಾರ್ಡ್‌ಗಳ ಖ್ಯಾತ ಕವಿ~ ಎಂದೇ ಅವರನ್ನು ಕರೆಯಲಾಗುತ್ತದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT