ADVERTISEMENT

ಮೋರ್ಸಿಂಗ್ ಎಂದರೆ...

ಮಿನುಗು ಮಿಂಚು

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 19:59 IST
Last Updated 22 ಜೂನ್ 2013, 19:59 IST

ಮೋರ್ಸಿಂಗ್ ಎಂದರೇನು?
ಅದೊಂದು ಅಪರೂಪದ ಸಂಗೀತ ವಾದ್ಯ. 1930ರಿಂದ ಕರ್ನಾಟಕ ಸಂಗೀತದಲ್ಲಿ ಅದನ್ನು ಬಳಸುತ್ತಾರೆ. ಮೃದಂಗಕ್ಕೆ ಜೊತೆಯಾಗಿ ಅದನ್ನು ಬಳಸುವುದು ಹೆಚ್ಚು. ಯಹೂದಿಗಳ ಹಾರ್ಪ್ ವಾದ್ಯದ ಭಾರತೀಯ ರೂಪವಿದು.

ನೋಡಲು ಅದು ಹೇಗಿರುತ್ತದೆ?
ಕುದುರೆಯ ಗೊರಸಿನ ಆಕಾರದ ಲೋಹದ ಚೌಕಟ್ಟಿನ ಮಧ್ಯೆ ಒಂದು ಬದಿಯಲ್ಲಿ ಸಿಕ್ಕಿಸಿ, ಇನ್ನೊಂದು ಬದಿಯಲ್ಲಿ ಮುಕ್ತವಾಗಿ ಆಡುವಂಥ ಸರಳನ್ನು ವಾದ್ಯ ಒಳಗೊಂಡಿರುತ್ತದೆ. ಸಣ್ಣ ಸರಳು ಮುಕ್ತವಾಗಿ ಆಡುತ್ತಾ ಎರಡೂ ಅಂಚಿಗೆ ಬಡಿದಾಗ ನಾದ ಹೊಮ್ಮುತ್ತದೆ. ಸರಳು ಆಡುವ ಆ ಭಾಗವನ್ನು `ಟ್ರಿಗರ್' ಎಂದು ಕರೆಯುತ್ತಾರೆ.

ಅದನ್ನು ನುಡಿಸುವುದು ಹೇಗೆ?
ವಾದ್ಯಗಾರ ಒಂದು ಕೈಯಲ್ಲಿ ಅದನ್ನು ಹಿಡಿದು, ಇನ್ನೊಂದು ಕೈಯಿಂದ ಸರಳನ್ನು ಮುಂಭಾಗದ ಹಲ್ಲಿಗೆ ತಾಗುವಂತೆ ಮೀಟುತ್ತಾನೆ. ನಾಲಗೆಯ ಚಲನೆಯಿಂದ ನಾದದಲ್ಲಿ ವೈವಿಧ್ಯ ಮೂಡಿಸುವುದು ಸಾಧ್ಯ. ಗಂಟಲಿನ ಸ್ನಾಯುಗಳ ಚಲನೆಯಿಂದಲೂ ಮೋರ್ಸಿಂಗ್ ವಾದನ ಕಳೆಗಟ್ಟುವಂತೆ ಮಾಡಬಹುದು.

ADVERTISEMENT

ದಕ್ಷಿಣ ಭಾರತವಲ್ಲದೆ ಈ ವಾದ್ಯ ಮತ್ತೆಲ್ಲಿ ಜನಪ್ರಿಯವಾಗಿದೆ?
ಅಸ್ಸಾಂನ ಕೆಲವು ಭಾಗಗಳಲ್ಲಿ ಇದನ್ನು ನುಡಿಸುತ್ತಾರೆ. ರಾಜಸ್ತಾನದ ಜನಪದ ಸಂಗೀತಗಾರರು ಈ ವಾದ್ಯವನ್ನು `ಮೋರ್ಚಂಗ್' ಎಂದು ಕರೆಯುತ್ತಾರೆ.

ಮೋರ್ಸಿಂಗ್ ವಾದ್ಯದಲ್ಲಿ ಹೆಸರುವಾಸಿಯಾದವರು ಯಾರು?
ಮೋರ್ಸಿಂಗ್ ಅಷ್ಟೇನೂ ಜನಪ್ರಿಯವಾದ ವಾದ್ಯವಲ್ಲ. ಆದರೂ ಅದರಲ್ಲಿ ಮಲೈಕೋಟ್ಟೈ ಆರ್.ಎಂ. ದೀನದಯಾಳು ಹಾಗೂ ಶ್ರೀರಂಗಂ ಕಣ್ಣನ್ ಹೆಸರು ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.