1. ಜ್ವಾಲಾಮುಖಿಯೊಂದರಿಂದ ಉಕ್ಕಿ ನದಿಯಂತೆ ಹರಿಯುತ್ತಿರುವ ಶಿಲಾಪಾಕದ ದೃಶ್ಯ ಚಿತ್ರ-1ರಲ್ಲಿದೆ. ‘ಅಗ್ನಿಶಿಲೆ’ಗಳಿಗೆ ಆಕರವಾಗುವ ಇಂಥ ಶಿಲಾಪಾಕದಲ್ಲಿನ ಪ್ರಧಾನ ಅಂಶ ಇವುಗಳಲ್ಲಿ ಯಾವುದು?
ಅ. ಗಂಧಕ
ಬ. ಕಬ್ಬಿಣ
ಕ. ಸಿಲಿಕಾ
ಡ. ಅಭ್ರಕ
2. ಚಿತ್ರ-2ರಲ್ಲಿರುವ ಪ್ರಾಣಿಯನ್ನು ನೋಡಿ. ಸ್ತನಿವರ್ಗದಲ್ಲಿದ್ದೂ ಇದಕ್ಕೆ ಕೊಕ್ಕು ಇದೆ; ಹಕ್ಕಿಗಳಂತೆಯೇ ಇದ್ದು ಮೊಟ್ಟೆ ಇಡುತ್ತದೆ! ಯಾವುದು ಈ ಪ್ರಾಣಿ ಗೊತ್ತೇ?
ಅ. ಡಾಲ್ಫಿನ್
ಬ. ಪ್ಲಾಟಿಪಸ್
ಕ. ನೀರುನಾಯಿ
ಡ. ಎಬಿಡ್ನಾ
3. ಪ್ರಾಚೀನ ಮಾನವರಿಂದ ತಯಾರುಗೊಂಡ ‘ಶಿಲಾಯುಧ’ಗಳು ಚಿತ್ರ-3ರಲ್ಲಿವೆ. ಮಾನವ ನಿರ್ಮಿತವಾದ ಅತ್ಯಂತ ಪುರಾತನ ಶಿಲಾಯುಧಗಳ ಕಾಲ ಇವುಗಳಲ್ಲಿ ಯಾವುದು?
ಅ. 28 ಲಕ್ಷ ವರ್ಷ ಹಿಂದೆ
ಬ. 20 ಲಕ್ಷ ವರ್ಷ ಹಿಂದೆ
ಕ. 2 ಲಕ್ಷ ವರ್ಷ ಹಿಂದೆ
ಡ. 40 ಸಾವಿರ ವರ್ಷ ಹಿಂದೆ.
4. ಪ್ರಸಿದ್ಧ ನಿಶಾಚರ ಪ್ರಾಣಿ ‘ಬಾವಲಿ’ ಚಿತ್ರ-4 ರಲ್ಲಿದೆ. ಇರುಳಿನಲ್ಲೂ, ಗಾಢ ಕತ್ತಲಿನಲ್ಲೂ ನಿರಾತಂಕವಾಗಿ ಹಾರಾಡಲು- ಬೇಟೆಯಾಡಲು ಬಾವಲಿಗಳು ಬಳಸುವ ಧ್ವನಿ-ಪ್ರತಿಧ್ವನಿ ವ್ಯವಸ್ಥೆಯನ್ನೇ ಅನುಕರಿಸಿ ನಿರ್ಮಿಸಲಾಗಿರುವ ಆಧುನಿಕ ‘ವೈಜ್ಞಾನಿಕ ಸಾಧನ’ ಯಾವುದು?
ಅ. ಲೇಸರ್
ಬ. ಸೇಸರ್
ಕ. ರಾಡಾರ್
ಡ. ಸೋನಾರ್
5. ನಮ್ಮ ಸೌರವ್ಯೆಹದ ‘ಅನಿಲದೈತ್ಯ’ ಗ್ರಹಗಳಲ್ಲೊಂದು ಚಿತ್ರ-5ರಲ್ಲಿದೆ.
ಅ. ಈ ಗ್ರಹದ ಹೆಸರೇನು?
ಬ. ಈ ಗ್ರಹವನ್ನು ಗುರುತಿಸಲು ನೆರವಾಗುವ ಅದರ ಲಕ್ಷಣ ಏನು?
6. ನಮ್ಮ ಭೂಮಿ ಮತ್ತು ಭೂಮಿಯ ಅತಿ ನಿಕಟ ಸಂಗಾತಿ ಚಂದ್ರ ಚಿತ್ರ-6ರಲ್ಲಿವೆ. ಚಂದ್ರನ ಗುರುತ್ವದ ಸೆಳೆತದಿಂದಾಗಿ ಭೂಮಿಯಲ್ಲಿ ಸಂಭವಿಸುವ ವಿದ್ಯಮಾನಗಳು ಯಾವುವು?
ಅ. ಭೂಕಂಪ
ಬ. ಭೂ ಖಂಡಗಳ ಚಲನೆ
ಕ. ಕಡಲ ಉಬ್ಬರ-ಇಳಿತ
ಡ. ಸುನಾಮಿ
ಇ. ಚಂಡಮಾರುತ
7. ಸುಪ್ರಸಿದ್ಧ ನೀಲಗಿರಿ ವೃಕ್ಷ ಜೋಡಿಯೊಂದು ಚಿತ್ರ-7ರಲ್ಲಿದೆ. ನೀಲಗಿರಿ ವೃಕ್ಷಗಳ ಮೂಲನೆಲೆ ಇವುಗಳಲ್ಲಿ ಯಾವುದು ಗೊತ್ತೇ?
ಅ. ಭಾರತ
ಬ. ಚೀನಾ
ಕ. ಮಯನ್ಮಾರ್
ಡ. ಆಸ್ಟ್ರೇಲಿಯಾ
8. ಕಡಲಲ್ಲಿ ಗುಂಪಾಗಿ ಈಜುತ್ತಿರುವ ಮೃದ್ವಂಗಿಗಳ ಒಂದು ವಿಧ ಚಿತ್ರ-9ರಲ್ಲಿದೆ. ಈ ಮೃದ್ವಂಗಿಗಳ ಚಿಪ್ಪಿನ ಆಕಾರವನ್ನು ಗಮನಿಸಿ-ಅವು ಯಾವ ವಿಧ ಎಂಬುದನ್ನು ಗುರುತಿಸಿ:
ಅ. ನಾಟಿಲಸ್
ಬ. ಆಕ್ಟೋಪಸ್
ಕ. ಶಂಬುಕ
ಡ. ಗ್ಯಾಸ್ಟ್ರೋಪಾಡ್
9. ಕಾಡುಕುದುರೆಗಳ ಒಂದು ಹಿಂಡು ಚಿತ್ರ-8 ರಲ್ಲಿದೆ. ಜೈವಿಕವಾಗಿ ಕುದುರೆಗಳ ಗುಂಪಿಗೇ ಸೇರಿರುವ ಪ್ರಾಣಿಗಳು ಹಲವಾರಿವೆ. ಈ ಪಟ್ಟಿಯಲ್ಲಿ ಯಾವ ಪ್ರಾಣಿ ಈ ಗುಂಪಿಗೆ ಸೇರಿಲ್ಲ?
ಅ. ಜೀಬ್ರಾ
ಬ. ನೀರುಕುದುರೆ
ಕ. ಕತ್ತೆ
ಡ. ಹೇಸರಗತ್ತೆ
10. ಚಕ್ಕೆ-ಚಕ್ಕೆ ಜೋಡಿಸಿದಂತೆ ತೋರುವ, ದೃಢವಾದ ಅಭೇದ್ಯ ಚರ್ಮಕವಚ ತೊಟ್ಟಿರುವ ಪ್ರಸಿದ್ಧ ಪ್ರಾಣಿ ಚಿತ್ರ-10ರಲ್ಲಿದೆ.
ಅ. ಈ ಪ್ರಾಣಿಯ ಹೆಸರೇನು?
ಬ. ಇದರ ಪ್ರಮುಖ ಆಹಾರ ಏನು?
11. ವಿಚಿತ್ರ, ವಿಲಕ್ಷಣ, ವಿಶ್ವಪ್ರಸಿದ್ಧ ಹೂವು ‘ರ್ಯಾಫ್ಲೀಸಿಯಾ’ ಚಿತ್ರ-11ರಲ್ಲಿದೆ. ಈ ಹೂವಿನ ವಿಶಿಷ್ಟ ಗುಣಗಳು ಯಾವುವು?
ಅ. ಅದರದು ಅತ್ಯಂತ ದೊಡ್ಡಗಾತ್ರ-ವಿಸ್ತಾರ.
ಬ. ಅದರಲ್ಲಿ ಅತಿಹೆಚ್ಚು ಮಕರಂಧ ಸಂಗ್ರಹ.
ಕ. ಅದರದು ಕೊಳೆತ ಮಾಂಸದ ವಾಸನೆ.
ಡ. ಅದರದು ಅತ್ಯಂತ ಗಾಢ ವರ್ಣವಿನ್ಯಾಸ.
12. ನೈಸರ್ಗಿಕ ಸಂಪನ್ಮೂಲವೊಂದನ್ನು ಹೊರತೆಗೆಯಲೆಂದು ಕಡಲಲ್ಲಿ ಸ್ಥಾಪಿಸಿರುವ ಸ್ಥಾವರವೊಂದರ ಚಿತ್ರ-12ರಲ್ಲಿದೆ. ಆ ಸಂಪನ್ಮೂಲ ಯಾವುದು?
ಅ. ಕಲ್ಲಿದ್ದಿಲು
ಬ. ಕಚ್ಚಾತೈಲ
ಕ. ಖನಿಜಗಳು
ಡ. ಮತ್ಸ್ಯಸಂಪತ್ತು
ಉತ್ತರಗಳು
1. ಕ-ಸಿಲಿಕಾ
2. ಬ-ಪ್ಲಾಟಿಪಸ್
3. ಬ-20 ಲಕ್ಷ ವರ್ಷ ಹಿಂದೆ
4. ಡ-ಸೋನಾರ್
5. ಅ-ನೆಪ್ಚೂನ್; ಬ-ನೀಲವರ್ಣ
6. ಕ-ಕಡಲಿನ ಉಬ್ಬರ-ಇಳಿತ
7. ಡ-ಆಸ್ಟ್ರೇಲಿಯಾ
8. ಅ-ನಾಟಿಲಸ್
9. ಬ-ನೀರುಕುದುರೆ
10. ಅ-ಪ್ಯಾಂಗೋಲಿನ್; ಬ-ಇರುವೆ, ಗೆದ್ದಲು
11. ಅ ಮತ್ತು ಕ
12. ಬ-ಕಚ್ಚಾ ತೈಲ.
-ಎನ್. ವಾಸುದೇವ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.