ADVERTISEMENT

ಕುವೆಂಪು ಪದ ಸೃಷ್ಟಿ | ಲಂಕಿಗ

ಜಿ.ಕೃಷ್ಣಪ್ಪ
Published 8 ಜೂನ್ 2025, 0:20 IST
Last Updated 8 ಜೂನ್ 2025, 0:20 IST
<div class="paragraphs"><p>ಕುವೆಂಪು</p></div>

ಕುವೆಂಪು

   

ಲಂಕಿಗ

ಲಂಕಿಗ (ನಾ). ಲಂಕೆಯಲ್ಲಿ ವಾಸಿಸುವವನು; ಲಂಕೆಯ ಪ್ರಜೆ

ADVERTISEMENT

ಮಾಯಾಸಮರ್ಥ ಮಾರೀಚ ದೈತ್ಯನು ಗೋಳಿಡುವುದನ್ನು ಕಂಡು ಭೋಂಕನೆ ಮೇಲೆದ್ದು ಅಪ್ಪಿಕೊಂಡ ರಾವಣನನ್ನು ಕುವೆಂಪು ‘ಲಂಕಿಗ’ ಎಂದು ಸಂಬೋಧಿಸಿದ್ದಾರೆ.

‘ಮಾಯಾ ಸಮರ್ಥನಾ ಮಾರೀಚದೈತ್ಯನುಂ

ಗೋಳಿಡುವುದಂ ಕಂಡು, ಲಂಕಿಗ ಭೋಂಕನೆಯೆ

ಮೇಲೆಳ್ದನಪ್ಪಿದನ್’

** *

‘ಲಂಕೆಗಿನ್ ಸುಖಮೆಲ್ಲಿ? ಲಂಕೆಗಿನ್ ಶುಭಮೆಲ್ಲಿ?’

ಲಂಕಿಗರ್ ನಮಗೆ ನೆಮ್ಮದಿಯೆಲ್ಲಿ?’ 

ಬಾಯ್ಗತ್ತಿ

ಬಾಯ್ಗತ್ತಿ (ನಾ). ನುಡಿ ಕತ್ತಿ

ಕಾಡಿನ ಬಹುದೂರದಿಂದ ರಾಮನಂತೆ ಮಾಯಾವಿ ಮಾರೀಚನು ‘ಓ ಲಕ್ಷ್ಮಣಾ’ ಎಂದು ಕೂಗುವನು. ಸೀತೆ ಬೆಚ್ಚಿ ಬೆವರುವಳು. ಲಕ್ಷ್ಮಣನನ್ನು ನಿಂದಿಸುವಳು. ಕುವೆಂಪು ಅವರು ಸೀತೆಯ ಆ ಕತ್ತರಿಸುವಂತಹ ಕಠೋರ ನುಡಿಯನ್ನು ‘ಬಾಯ್ಗತ್ತಿ’ ಪದದಿಂದ ಹೀಗೆ ಚಿತ್ರಿಸಿದ್ದಾರೆ:

‘ಹಾ ಬೇರ್ಗೊಯ್ದುದತ್ತಿಗೆಯ ಬಾಯ್ಗತ್ತಿ

ಊರ್ಮಿಳಾ ಪ್ರಿಯನ ನಿಶ್ಚಲತೆಯಂ!’

ರೆಪ್ಪೆವುಲ್ಲು

ರೆಪ್ಪೆವುಲ್ಲು (ನಾ). ಎವೆಯ ಕೂದಲು

ಸಂನ್ಯಾಸಿ ವೇಷದ ರಾವಣನು ಒಂಟಿಯಾಗಿರುವ ಸೀತೆಯನ್ನು ಕಂಡು ಹುಸಿಧ್ಯಾನವನ್ನು ನಟಿಸುತ್ತ, ಕ್ಷುದ್ರ ಭಾವವನ್ನು ಮುಚ್ಚಿಕೊಂಡಂತೆ ನಿಂತಿರುತ್ತಾನೆ. ಅದನ್ನು ಕುವೆಂಪು ‘ರೆಪ್ಪೆವುಲ್ಲು’ ರೂಪಕದಿಂದ ಹೀಗೆ ಚಿತ್ರಿಸಿದ್ದಾರೆ:

‘ಬಕಧ್ಯಾನಮಂ

ನಿಂದಿಪೊಲಲ್ಲೆ ನಿಂದನು, ಬಗೆಯ ಬಾವಿಯಂ

ರೆಪ್ಪೆವುಲ್ಲಿಂದಡಕಿ ಮುಚ್ಚಿ’ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.