ADVERTISEMENT

ಚಿಟ್ಟೆ ರೆಕ್ಕೆ

ಮೊದಲ ಓದು

ಚ.ಹ.ರಘುನಾಥ
Published 11 ಫೆಬ್ರುವರಿ 2017, 19:30 IST
Last Updated 11 ಫೆಬ್ರುವರಿ 2017, 19:30 IST
ಪು: 96 ಬೆ: ₹ 75
ಪು: 96 ಬೆ: ₹ 75   
ಚಿಟ್ಟೆ ರೆಕ್ಕೆ
ಲೇ: ನವೀನ್ ಮಧುಗಿರಿ
ಪ್ರ: ವಿನಯ ಪ್ರಕಾಶನ, ವೀರಾಪುರ, ನೇರಳೇಕೆರೆ ಅಂಚೆ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ–572132
 
**
‘ಚಿಟ್ಟೆ ರೆಕ್ಕೆ’ ಕಿರುಗವಿತೆಗಳ ಸಂಕಲನ. ಹೂವಿನಿಂದ ಹೂವಿಗೆ ಹಾರುವ ಚಿಟ್ಟೆ, ಕಾವ್ಯದ ಬೆರಗು, ಜೀವಂತಿಕೆ ಹಾಗೂ ಚಲನಶೀಲತೆಯನ್ನು ಸೂಚಿಸುವ ಅದ್ಭುತ ರೂಪಕವೂ ಹೌದು. ಈ ಚಿಟ್ಟೆ ರೂಪಕದ ಹುಡುಕಾಟದ ಹಂಬಲವನ್ನು ಸಂಕಲನದಲ್ಲಿ ಅಲ್ಲಲ್ಲಿ ಕಾಣಬಹುದು.
 
‘ಒಂದೇ ರಾತ್ರಿ / ನೂರಾರು ಕಡಲು, ಕೊಳ, ನದಿ / ಒಬ್ಬನೇ ಚಂದಿರ / ಎಷ್ಟೊಂದು ಅಲೆಮಾರಿ’, ‘ಕೊಳದ ಧ್ಯಾನಾಭ್ಯಾಸ / ಭಂಗಗೊಳಿಸುತ್ತಿವೆ / ಕಪ್ಪೆ, ಗಾಳಿ, ತರಗೆಲೆ’ – ಮುದಗೊಳಿಸುವ ಇಂಥ ಸಾಲುಗಳು ಸಂಕಲನದಲ್ಲಿವೆ.
 
ಹೂವಿನಂತಿದ್ದ ಹುಡುಗಿ ರೆಕ್ಕೆಗಳ ಕಟ್ಟಿಕೊಂಡು, ಚಿಟ್ಟೆಯಾದಳು, ಹಾರಿಹೋದಳು ಎನ್ನುವ ಕವಿ, ತಮ್ಮ ಸಂಕಲನವನ್ನು ‘ಹಾರಿ ಹೋದ ಚಿಟ್ಟೆಗೆ’ ಅರ್ಪಿಸಿರುವುದು ಸೂಕ್ತವಾಗಿಯೇ ಇದೆ. ಇಲ್ಲಿನ ಕಿರುಗವಿತೆಗಳು, ಕಾಲುದಾರಿಯಿಂದ ಮುಖ್ಯರಸ್ತೆಗೆ ಬರುವ ಹಂಬಲದಲ್ಲಿ ಕವಿ ನಡೆಸಿರುವ ಮೋಹಕ ತಾಲೀಮಿನಂತಿವೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.