ADVERTISEMENT

ಮೊದಲ ಓದು: ಪ್ರಮುಖ ವಚನಕಾರರ ವಚನ ವಿಶ್ಲೇಷಣೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2023, 23:30 IST
Last Updated 23 ಡಿಸೆಂಬರ್ 2023, 23:30 IST
ಪುಸ್ತಕದ ಮುಖಪುಟ
ಪುಸ್ತಕದ ಮುಖಪುಟ   

ಅಲ್ಲಮಪ್ರಭು, ಬಸವಣ್ಣನಿಂದ ಹಿಡಿದು ಅನೇಕ ವಚನಕಾರರು ವಚನ ಸಾಹಿತ್ಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅಂತಹ ಪ್ರಮುಖ 60 ವಚನಕಾರರ ವಚನಗಳ ವಿಶ್ಲೇಷಣೆಯನ್ನು ಒಳಗೊಂಡಿದೆ ಈ ‘ವಚನಬೋಧಿ’ ಕೃತಿ.

‘ಲೇಖಕರು ಆಯ್ದ ವಚನಗಳನ್ನು ತಿಳಿಯಾದ ಕನ್ನಡದಲ್ಲಿ ವ್ಯಾಖ್ಯಾನಿಸಿದ್ದಾರೆ.ವಿದ್ಯಾರ್ಥಿಗಳಿಗೆ, ವಚನಾಸಕ್ತರಿಗೆ ಉಪಯುಕ್ತವಾಗಿದೆ. ವಚನ ವೈವಿಧ್ಯ, ವಿಚಾರಗಳ ವಿಸ್ತಾರವು ಓದುಗರ ಗಮನಕ್ಕೆ ಬರುವಂತೆ ಕೃತಿ ರೂಪುಗೊಂಡಿದೆ’ ಎಂದು ಪುಸ್ತಕದ ಬೆನ್ನುಡಿಯಲ್ಲಿ ಪ್ರೊ.ಕಾಳೇಗೌಡ ನಾಗವಾರ ಅವರು ಹೇಳಿದ್ದಾರೆ.

ದೇವರದಾಸಿಮಯ್ಯ, ಅಲ್ಲಮ, ಬಸವಣ್ಣ, ಸಿದ್ಧರಾಮಯ್ಯ, ಸಕಲೇಶ ಮಾದರಸ, ಅಂಬಿಗರ ಚೌಡಯ್ಯ, ಉರಿಲಿಂಗದೇವನಿಂದ ಹಿಡಿದು ಮಸಣಮ್ಮ, ಕಾಳವ್ವೆ, ಗುಡ್ಡವ್ವೆ ತನಕ ಪ್ರಮುಖ ವಚನಕಾರರ ಜನಪ್ರಿಯ ವಚನಗಳ ವಿಶ್ಲೇಷಣೆ ಕೃತಿಯಲ್ಲಿದೆ. ಉದಾಹರಣೆಗೆ: ‘ಲೋಕದ ಡೊಂಕ ನೀವೇಕೆ ತಿದ್ದುವಿರಿ?...’ ಎಂಬ ಬಸವಣ್ಣನವರ ಜನಪ್ರಿಯ ವಚನದ ಸಂಪೂರ್ಣ ಅರ್ಥವನ್ನು ಲೇಖಕರು ವಿವರಿಸಿದ್ದಾರೆ. 60 ಬರಹಗಳನ್ನು ಹೊಂದಿರುವ ಕೃತಿಯಲ್ಲಿ ವಚನಗಳ ಜೊತೆಗೆ ವಚನಕಾರರ ಕುರಿತ ಕಿರುಪರಿಚಯವೂ ಇದೆ.

ADVERTISEMENT

ವಚನಬೋಧಿ

ಲೇ:ಶಿವಕುಮಾರ್‌

ಪ್ರ: ಅಕ್ಕ ಐ.ಎ.ಎಸ್‌ ಅಕಾಡೆಮಿ

ಸಂ:9560863287

ಪು: 432

ಬೆ: 450

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.