ADVERTISEMENT

ಪುಸ್ತಕದ ಮಾತು: ಜನಪದ ನಾಯಕ ಡಾ.ರಾಜಕುಮಾರ್

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 5:49 IST
Last Updated 24 ಏಪ್ರಿಲ್ 2019, 5:49 IST
ರಾಜ್‌ಕುಮಾರ್
ರಾಜ್‌ಕುಮಾರ್   

ಪ್ರೊ. ಬರಗೂರು ರಾಮಚಂದ್ರಪ್ಪನವರದು ಬಹುಮುಖ ಪ್ರತಿಭೆಯ ಅನನ್ಯ ಸಾಧನೆ. ಸಾಹಿತ್ಯ, ಸಿನಿಮಾ ಮತ್ತು ಜನ ಸಂಸ್ಕೃತಿಯ ಕ್ಷೇತ್ರಗಳಲ್ಲಿ ತಮ್ಮದೇ ವಿಶಿಷ್ಟ ಚಿಂತನೆ ಮತ್ತು ಕ್ರಿಯೆಗಳ ಮೂಲಕ ನಾಡಿನ ಸಾಮಾಜಿಕ ಚಲನಶೀಲತೆಗೆ ಕಾರಣರಾದ ಬರಗೂರರು, ಮನುಷ್ಯ ಸಂಬಂಧಗಳ ಗಾಢ ಸೆಳೆತದಿಂದ ಅಪಾರ ಸ್ನೇಹ ವಲಯ ಕಟ್ಟಿಕೊಂಡಿದ್ದಾರೆ.

ಡಾ. ರಾಜಕುಮಾರ್ ಜತೆ ಆತ್ಮೀಯ ಸಂಬಂಧವಿಟ್ಟು ಕೊಂಡಿದ್ದ ಬರಗೂರರು ಕಟ್ಟಿಕೊಟ್ಟಿರುವ ‘ಜನಪದ ನಾಯಕ ಡಾ. ರಾಜಕುಮಾರ್’ ಕೃತಿಯು ಅವರಿಬ್ಬರ ಸಂಬಂಧದಷ್ಟೇ ಆಪ್ತವಾಗಿ ಮೂಡಿಬಂದಿದೆ. ಅವರ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಈ ಕೃತಿ ಸಾಧಾರವಾಗಿ ಚಿತ್ರಿಸಿದೆ. ಡಾ.ರಾಜ್ ಅವರಲ್ಲಿದ್ದ ಜನಪದ ವ್ಯಕ್ತಿತ್ವವನ್ನು ಕಂಡುಂಡಿದ್ದ ಸತ್ಯ ಘಟನಾವಳಿಗಳನ್ನು ಈ ಪುಸ್ತಕದಲ್ಲಿ ಭಾವನಾತ್ಮಕವಾಗಿ ಅಭಿವ್ಯಕ್ತಿಗೊಳಿಸಲಾಗಿದೆ. ಜನ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ.

ಡಾ. ರಾಜ್‌ ಅವರ ವ್ಯಕ್ತಿತ್ವದ ವಿಶ್ಲೇಷಣೆಯ ಜೊತೆಗೆ ಅವರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕೊಡುಗೆಯನ್ನು ಸಾದರಪಡಿಸುವ ಐದು ಲೇಖನಗಳು ಈ ಪುಸ್ತಕದಲ್ಲಿವೆ. ರಾಜಕುಮಾರ್ ಎಂದರೆ ಏನು ಎಂಬುದಕ್ಕೊಂದು ಶೋಧ, ಏನು ಮಾಡಿದರು ಎಂಬುದಕ್ಕೊಂದು ಉತ್ತರ– ಈ ಪುಟ್ಟ ಪುಸ್ತಕ.

ADVERTISEMENT

ಕೃತಿ ಲೋಕಾರ್ಪಣೆ– ಡಾ.ಎಚ್.ಎಸ್. ರಾಘವೇಂದ್ರ ರಾವ್. ಅತಿಥಿ–ತಾರಾ ಅನೂರಾಧ, ಅಧ್ಯಕ್ಷತೆ– ರಾಘವೇಂದ್ರ ರಾಜಕುಮಾರ್. ಉಪಸ್ಥಿತಿ– ಪ್ರೊ.ಬರಗೂರು ರಾಮಚಂದ್ರಪ್ಪ. ಡಾ. ರಾಜಕುಮಾರ್ ಚಿತ್ರಗೀತೆಗಳ ಗಾಯನ– ಡಾ. ಶಮಿತಾ ಮಲ್ನಾಡ್ ಮತ್ತು ತಂಡ. ಆಯೋಜನೆ– ಜನ ಪ್ರಕಾಶನ. ಸ್ಥಳ– ಶ್ರೀಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. ಇದೇ 30ರ ಬೆಳಿಗ್ಗೆ 10.30ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.