ADVERTISEMENT

ಐತಿಹಾಸಿಕ ಕಾಲಘಟ್ಟದ ಚಿತ್ರಣದ ಕಾದಂಬರಿ ಹಿಮ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2018, 14:26 IST
Last Updated 29 ಡಿಸೆಂಬರ್ 2018, 14:26 IST

ಟರ್ಕಿ ಲೇಖಕ ಒರ್ಹಾನ್‍ಪಾಮುಕ್‌ಗೆ ನೊಬೆಲ್ ಪ್ರಶಸ್ತಿ ತಂದುಕೊಟ್ಟ ಕೃತಿ ‘ಸ್ನೋ’ ರಾಜಕೀಯ ಕಾದಂಬರಿ.

ಪಾಮುಕ್‌ರ ಸಹಪಾಠಿ ಮೌರೀನ್ ಫ್ರೀಲಿ ಈ ಕಾದಂಬರಿಯನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ.

‘ಹಿಮ’ ಹೆಸರಿನಲ್ಲಿ ಈ ಕಾದಂಬರಿ ಕನ್ನಡಕ್ಕೆ ಬಂದಿದೆ. ಇದು ಕನ್ನಡಕ್ಕೆ ಬಂದಿರುವ ಪಾಮುಕ್‌ರವರ ಮೊದಲ ಕೃತಿಯೂ ಹೌದು.ಟರ್ಕಿ ಭಾಷೆಯಲ್ಲಿ ‘ಕಾರ್ಸ್’ ಎಂದರೆ ಹಿಮ ಎನ್ನುವ ಅರ್ಥವಿದೆ.

ADVERTISEMENT

ಟರ್ಕಿ ದೇಶದ ಈಶಾನ್ಯ ಭಾಗದಲ್ಲಿರುವ ಸಣ್ಣ ನಗರ ‘ಕಾರ್ಸ್’ ಕಾದಂಬರಿಯ ಕೇಂದ್ರಸ್ಥಳ. 1990ರ ದಶಕದಲ್ಲಿ ಟರ್ಕಿಯಲ್ಲಿ ಇಸ್ಲಾಂ ಮೂಲಭೂತವಾದಿಗಳು ಅಧಿಕಾರಕ್ಕೆ ಬರುವ ಆತಂಕ ಎದುರಾಗಿತ್ತು. ಇದೊಂದು ಐತಿಹಾಸಿಕ ಕಾಲಘಟ್ಟ.ಈ ವೇಳೆಯಲ್ಲಿನಾಗರಿಕರು ಮತ್ತು ಇಸ್ಲಾಮಿ ಮೂಲಭೂತವಾದಿಗಳ ನಡುವೆ ನಡೆಯುವಸಂಘರ್ಷ, ತಳಮಳಗಳನ್ನು ಲೇಖಕರುಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ಧಾರ್ಮಿಕ ಮೂಲಭೂತವಾದಿಗಳು, ಮುಖಂಡರ ಕುರಿತು ಇಲ್ಲಿ ಇವರದು ನಿಷ್ಪಕ್ಷಪಾತ ನಿಲುವು. ಭಯಾನಕ ಎನಿಸುವ ಅಸಹಿಷ್ಣುತೆ, ಜನಾಂಗೀಯ ದ್ವೇಷ, ಹಿಂಸೆ, ಕಗ್ಗೊಲೆಗಳ ಚಿತ್ರಣಗಳು ಕಾದಂಬರಿಯಲ್ಲಿ ವಿಪುಲವಾಗಿವೆ.

ಹಿಮ

₹550

ಪುಟ: 600

ಅನುವಾದ: ಕೆ.ಎಸ್. ವೈಶಾಲಿ

ಪ್ರ: ಸೃಷ್ಟಿ ಪಬ್ಲಿಕೇಷನ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.