ADVERTISEMENT

ಪುಸ್ತಕ ವಿಮರ್ಶೆ: ಆರ್‌.ನಾಗೇಶ್‌ ನೆನಪಿನಲ್ಲಿ ರಂಗವಿಹಂಗಮ

ಅಭಿಲಾಷ್ ಪಿ.ಎಸ್‌.
Published 23 ಅಕ್ಟೋಬರ್ 2021, 22:15 IST
Last Updated 23 ಅಕ್ಟೋಬರ್ 2021, 22:15 IST
ಆರ್‌. ನಾಗೇಶ್‌ ರಂಗವಿಹಂಗಮ ಕೃತಿ
ಆರ್‌. ನಾಗೇಶ್‌ ರಂಗವಿಹಂಗಮ ಕೃತಿ   

ರಂಗಭೂಮಿಯ ಯಾವ ತರಬೇತಿಯನ್ನೂ ಪಡೆಯದೇ ಇದ್ದರೂ 20ನೇ ಶತಮಾನದ ಉತ್ತರಾರ್ಧದ ಐದು ದಶಕಗಳ ಕಾಲ ಹವ್ಯಾಸಿ ರಂಗಭೂಮಿಯ ನಾಯಕ ಎಂದು ಕರೆಸಿಕೊಂಡ, ಈ ವೇದಿಕೆಗೆ ನೂರಾರು ರಂಗಕರ್ಮಿಗಳನ್ನು, ಕಲಾವಿದರನ್ನು ನೀಡಿದ ರಾಮರಾಜೇ ಅರಸು ನಾಗೇಶ(ಆರ್‌.ನಾಗೇಶ್‌) ಅವರ ನೆನಪಿನಲ್ಲಿ ಬಂದಿರುವ ಕೃತಿ ‘ಆರ್‌.ನಾಗೇಶ್‌ ರಂಗವಿಹಂಗಮ’.

ರಂಗಭೂಮಿಯ ಯಾವ ತರಬೇತಿಯನ್ನೂ ಪಡೆಯದೇ ಇದ್ದರೂ 20ನೇ ಶತಮಾನದ ಉತ್ತರಾರ್ಧದ ಐದು ದಶಕಗಳ ಕಾಲ ಹವ್ಯಾಸಿ ರಂಗಭೂಮಿಯ ನಾಯಕ ಎಂದು ಕರೆಸಿಕೊಂಡ, ಈ ವೇದಿಕೆಗೆ ನೂರಾರು ರಂಗಕರ್ಮಿಗಳನ್ನು, ಕಲಾವಿದರನ್ನು ನೀಡಿದ ರಾಮರಾಜೇ ಅರಸು ನಾಗೇಶ(ಆರ್‌.ನಾಗೇಶ್‌) ಅವರ ನೆನಪಿನಲ್ಲಿ ಬಂದಿರುವ ಕೃತಿ ‘ಆರ್‌.ನಾಗೇಶ್‌ ರಂಗವಿಹಂಗಮ’. 15 ವರ್ಷಗಳ ಹಿಂದೆಯೇ ಬರಬೇಕಿದ್ದ ಇಂಥ ಒಂದು ಕೃತಿ ತಡವಾಗಿದ್ದೇಕೆ ಎನ್ನುವ ಕಾರಣವನ್ನು ನೀಡುತ್ತಾ, ಆರ್‌.ನಾಗೇಶ್‌ ಅವರ ಒಡನಾಡಿಗಳಾಗಿದ್ದ ಶ್ರೀನಿವಾಸ್‌ ಜಿ.ಕಪ್ಪಣ್ಣ, ಟಿ.ಎನ್‌.ಸೀತಾರಾಂ, ಟಿ.ಎಸ್‌.ನಾಗಾಭರಣ, ಕೆ.ಮರಳಸಿದ್ದಪ್ಪ, ಪುರುಷೋತ್ತಮ ಬಿಳಿಮಲೆ, ಎನ್.ಕೆ.ಮೋಹನರಾಂ, ಉಮಾಶ್ರೀ, ಮಂಡ್ಯ ರಮೇಶ ಮುಂತಾದವರ ನೆನಪಿನ ಬುತ್ತಿಯಿಂದ ಬಂದ ಲೇಖನ, ಛಾಯಾಚಿತ್ರಗಳೊಂದಿಗೆ ಕೃತಿಯನ್ನು ಸಂಪಾದಿಸಿದ್ದಾರೆ ಬಿ.ಎಸ್‌.ವಿದ್ಯಾರಣ್ಯ.

‘ರಂಗನೊಗ ಆರ್‌. ನಾಗೇಶ್‌–75’ ನಾಟಕೋತ್ಸವದ ಬಳಿಕ ನಾಟಕೋತ್ಸವದ ಸಮಿತಿಯ ಆಶಯದಂತೆ ಮೊಳಕೆಯೊಡೆದ ಈ ಕೃತಿ, ನಾಗೇಶ್‌ ಅವರ ರಂಗಹೆಜ್ಜೆಗಳನ್ನು ಕಟ್ಟಿಕೊಟ್ಟಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.