ADVERTISEMENT

ಪುಸ್ತಕ ವಿಮರ್ಶೆ | ವ್ಯಾಸ ಮಹಾಭಾರತ ಸರಳ ಗದ್ಯಕಥನ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2022, 19:30 IST
Last Updated 16 ಏಪ್ರಿಲ್ 2022, 19:30 IST
ವ್ಯಾಸ ಮಹಾಭಾರತ
ವ್ಯಾಸ ಮಹಾಭಾರತ   

ಜನಜೀವನದ ಜೊತೆಗೆ ಹಾಸುಹೊಕ್ಕಾಗಿರುವ ಧರ್ಮಗ್ರಂಥ ಮಹಾಭಾರತ. ಮಹಾಕಾ‌ವ್ಯವೂ ಹೌದು. ಈ ಪೌರಾಣಿಕ ಕಥನ ಈಗಾಗಲೇ ಭಾರತದ ವಿವಿಧ ಭಾಷೆಗಳಲ್ಲಿ ಪುನರ್‌ಸೃಷ್ಟಿಯಾಗಿದೆ. ಹಳಗನ್ನಡದಿಂದ ಹೊಸಗನ್ನಡದಲ್ಲೂ ಇದರ ಮೇಲೆ ಕೃತಿಗಳು ರಚನೆಯಾಗಿವೆ. ಈ ಸಾಲಿಗೆ ಸೇರ್ಪಡೆಯಾಗುವ ಕೃತಿ ಕನ್ನಡದಲ್ಲಿ ಇತ್ತೀಚೆಗೆ ಪ್ರಕಟವಾದ ‘ವ್ಯಾಸ ಮಹಾಭಾರತ: ಸಂಕ್ಷಿಪ್ತ ಸರಳ ಗದ್ಯಕಥನ’. ನಾಲ್ಕು ದಶಕಗಳಿಂದ ಅನುವಾದಿತ, ಪೌರಾಣಿಕ ಕೃತಿ ಮತ್ತು ಚಾರಿತ್ರಿಕ ಕಾದಂಬರಿಗಳ ರಚನೆ ಮೂಲಕ ಹೆಜ್ಜೆಗುರುತು ಮೂಡಿಸಿರುವ ಸು.ರುದ್ರಮೂರ್ತಿ ಶಾಸ್ತ್ರಿ ಅವರ ಇತ್ತೀಚಿನ ಕೃತಿ ಇದು.

ವ್ಯಾಸಭಾರತವು ಮೂಲ ಮಹಾಭಾರತವೆಂದು ಪ್ರಚಲಿತದಲ್ಲಿದೆ. ಲೇಖಕರೇ ಹೇಳಿರುವಂತೆ ಇದು ಮೂಲಕೃತಿಯ ಸರಳ ರೂಪ. ಒಟ್ಟು 18 ಪರ್ವಗಳಲ್ಲಿ (ಆದಿಪರ್ವದಿಂದ ಸ್ವರ್ಗಾರೋಹಣ ಪರ್ವ) ಬರುವ ಮಹಾಭಾರತದ ಕಥನಗಳನ್ನು ರುದ್ರಮೂರ್ತಿ ಶಾಸ್ತ್ರಿ ಹೊಸಗನ್ನಡದಲ್ಲಿ ಅಚ್ಚುಕಟ್ಟಾಗಿ ದಾಖಲಿಸಿದ್ದಾರೆ. ಮೂಲಕೃತಿಗೆ ಧಕ್ಕೆ ಭಾರದಂತೆ, ಜೊತೆಗೆ ಯಾವುದೇ ಕಥಾ ಭಾಗವನ್ನು ಬಿಡದೇ ಸಂಗ್ರಹಿಸಿಕೊಟ್ಟಿರುವ ಶ್ರಮ ಮೆಚ್ಚುವಂಥದ್ದು. ಪಾತ್ರಗಳ ಕಥೆಗಳನ್ನೂ, ಪ್ರಸಂಗಗಳನ್ನು ಆಸಕ್ತಿಯಿಂದ ಓದಿಸಿಕೊಂಡು ಹೋಗುವ ರೀತಿಯಲ್ಲಿರುವಂತೆ ಲೇಖಕರು ಎಚ್ಚರಿಕೆ ವಹಿಸಿದ್ದಾರೆ. ಕೃತಿಯ ಕೆಲವು ಕಡೆ ಇರುವ ರೇಖಾಚಿತ್ರಗಳು (ಕಲಾವಿದ ಸುಧಾರಕ ದರ್ಭೆ) ಕಥೆಗಳಿಗೆ ಶೋಭೆ ಮೂಡಿಸಿವೆ. ಮಹಾಭಾರತದ ಬಗ್ಗೆ ತಿಳಿದುಕೊಳ್ಳುವ ಆಸಕ್ತ ಓದುಗರಿಗೆ ಇದು ಉಪಯುಕ್ತ ಕೃತಿಯಾಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT