ADVERTISEMENT

ಸ್ನೇಹಾ ರಂಗಪ್ರವೇಶ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2013, 19:59 IST
Last Updated 22 ಫೆಬ್ರುವರಿ 2013, 19:59 IST
ಸ್ನೇಹಾ ರಂಗಪ್ರವೇಶ
ಸ್ನೇಹಾ ರಂಗಪ್ರವೇಶ   

ಡಾ. ಸಂಜಯ್ ಶಾಂತಾರಾಮ್ ಅವರ ಶಿಷ್ಯೆ ಸ್ನೇಹಾ ಭಾಗ್ವತ್ ಅವರ ಭರತನಾಟ್ಯ ರಂಗಪ್ರವೇಶ ಶನಿವಾರ (ಫೆ.23) ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿದೆ.

ವೃತ್ತಿಯಲ್ಲಿ ವಕೀಲೆಯಾಗಿರುವ ಸ್ನೇಹಾ ಭಾಗ್ವತ್ ವಕೀಲರಾಗಿರುವ ತಂದೆ ಎಂ.ಎಸ್.ಭಾಗ್ವತ್ ಅವರೊಂದಿಗೆ ಹೈಕೋರ್ಟ್‌ನಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದಾರೆ. ಏಳನೆಯ ವಯಸ್ಸಿನಲ್ಲಿಯೇ ಗುರು ಭವಾನಿ ರಾಮನಾಥ್ ಅವರ ಮಾರ್ಗದರ್ಶನದಲ್ಲಿ ನೃತ್ಯಲೋಕಕ್ಕೆ ಪದಾರ್ಪಣೆ ಮಾಡಿರುವ ಇವರು ಈಗ `ಶಿವಪ್ರಿಯಾ ಸ್ಕೂಲ್ ಆಫ್ ಡಾನ್ಸ್'ನಲ್ಲಿ ಡಾ. ಸಂಜಯ್ ಶಾಂತಾರಾಮ್ ಅವರಿಂದ ನೃತ್ಯ ತರಬೇತಿ ಮುಂದುವರಿಸಿದ್ದಾರೆ. ಕಿರಿಯ ಹಾಗೂ ಹಿರಿಯ ದರ್ಜೆ ಭರತನಾಟ್ಯ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿರುವ ಸ್ನೇಹಾ, ವಿದ್ವತ್ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ.

ರಂಗಪ್ರವೇಶದಲ್ಲಿ ಜಿ.ಶ್ರೀಕಾಂತ್ (ಸಂಗೀತ), ಗುರು ಡಾ. ಸಂಜಯ್ ಶಾಂತಾರಾಂ (ನಟುವಾಂಗ), ಜಿ. ಗುರುಮೂರ್ತಿ (ಮೃದಂಗ), ಎಸ್.ಮಹೇಶ್ (ಕೊಳಲು), ಆರ್.ದಯಾಕರ್ (ವಯಲಿನ್), ಡಿ.ವಿ. ಪ್ರಸನ್ನ ಕುಮಾರ್ (ರಿದಂ). ಸಹಕರಿಸಲಿದ್ದಾರೆ. ಸ್ಥಳ: ಚೌಡಯ್ಯ ಸ್ಮಾರಕ ಸಭಾಭವನ, ಸಂಜೆ 5.45. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.