ADVERTISEMENT

ಅಮೂಲ್ಯ ಜೀವವು

ಕಶ್ಮೀರಾ ರೆಡ್ಡಿ
Published 10 ಅಕ್ಟೋಬರ್ 2018, 10:07 IST
Last Updated 10 ಅಕ್ಟೋಬರ್ 2018, 10:07 IST
ಚಿತ್ರ: ಗುರು ನಾವಳ್ಳಿ
ಚಿತ್ರ: ಗುರು ನಾವಳ್ಳಿ   

ನೀಲಾಕಾಶದ ತುಂಬ ಬಿಳಿ ಮೋಡಗಳಾಟ,

ಹಸಿರು ಗಿಡಮರಗಳ ತೂಗುಯ್ಯಾಲೆ,

ಪಲ್ಲವಗಳುದಿಸುವ ವಸಂತ ಕಾಲ,

ADVERTISEMENT

ವರ್ಣರಂಜಿತ ಮೇ ಹೂಗಳ ಲಾಸ್ಯ

ಸೌಂದರ್ಯವೇ ಮೂರ್ತಿವೆತ್ತಂತಿದ್ದ ಆ ಸುಂದರ ಮಹಿಳೆ,

ಪ್ರಕಾಶಮಾನವಾಗಿ ಹೊಳೆಯುವ ಕಂಗಳು ಬಾಡಿದಂತೆ,

ಪೇಲವ ಮೊಗದಲೂ ಮಿನುಗುವ ಬೆಚ್ಚನೆ ನಗೆ, ಆ ನಗೆಯಲ್ಲಿ ಜೀವನದ ಹಸಿವು,

ಅವಳ ಘನತೆವೆತ್ತ ವ್ಯಕ್ತಿತ್ವವ ಕಂಡು ಹೆಮ್ಮೆ

ಅವಳ ಪ್ರೀತಿಯ ವೈಶಾಲ್ಯಕೆ ಸೂರ್ಯ ಚಂದ್ರರ ಹೊಳಹು,

ಕಾಲಚಕ್ರವು ಕರಗಿಸಿರಲಿಲ್ಲ ಸೌಂದರ್ಯ, ಕರುಣೆಯನ್ನು

ಅವಳ ಜಾಣ್ಮೆ, ಜೀವನ ಪ್ರೀತಿಗಳಿಂದ ಪ್ರಭಾವಿತ ನಾ,

ಅವಳ ಅಸ್ತಿತ್ವವೇ ಸಂಪತ್ತು ಸಮೃದ್ಧಿ

ಕೊನೆಗೂ ಸೋಲಿನನುಭವ ಯುದ್ಧದಲ್ಲಿ,

ಸ್ವರ್ಗಕ್ಕೇರಿತು ಅಮೂಲ್ಯ ಜೀವವು ಚಿನ್ನದ ಮೆಟ್ಟಲೇರಿ,

ತಡೆಯಲಾಗದು ಸಮಯವನ್ನು,

ಶಾಶ್ವತವಾದ ನೆಲೆಯ ಸೇರಿತು ಆತ್ಮವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.