ADVERTISEMENT

ಬನ್ನಿ ಗೆಳೆಯರೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2019, 19:45 IST
Last Updated 31 ಆಗಸ್ಟ್ 2019, 19:45 IST
ಕಲೆ: ಶಶಿಧರ ಹಳೇಮನಿ
ಕಲೆ: ಶಶಿಧರ ಹಳೇಮನಿ   

ಬನ್ನಿರಿ ಗೆಳೆಯರೆ ಆಡೋಣ
ನಾವು ನೀವು ಜೋಕಾಲಿ
ಅಕ್ಕತಂಗೇರು ಸೇರೋಣ
ಸೇರಿ ಆಡೋಣ ಜೋಕಾಲಿ

ಅಮ್ಮನು ಮಾಡಿದ ಗರಿಗರಿ
ಚಕ್ಕುಲಿ ತಿಂದು ನಾವು ಆಡೋಣ
ಅಜ್ಜಿಯು ಮಾಡಿದ ಕರ್ಚಿಕಾಯಿ
ಸವಿಯುತ ನಾವು ಹಾಡೋಣ

ಅಪ್ಪನು ತಂದ ಹೊಸಹೊಸ ಬಟ್ಟೆ
ತೊಟ್ಟು ನಾವು ಕುಣಿಯೋಣ
ಅಣ್ಣನು ಮಾಡಿದ ಕೊಬ್ಬರಿ
ಗಿರಿಕೆಯನ್ನು ಆಡೋಣ

ADVERTISEMENT

ಅತ್ತಿಗೆ ತಂದ ಬೇಸನ ಉಂಡಿ
ಸವಿಯುತ ನಾವು ನಲಿಯೋಣ
ಮಾವನು ತಂದ ಬಣ್ಣದ ಬುಗರಿ
ಭರದಿಂದ ನಾವು ಆಡೋಣ

ಅಜ್ಜನು ಹೊಸೆದ ಹಗ್ಗದಿಂದ
ಜೋಕಾಲಿ ಕಟ್ಟೋಣ
ದೊಡ್ಡಪ್ಪನು ಮಾಡಿದ ಬಟ್ಟೆ ಚಂಡಲಿ
ದಪ್ಪೆದುಪ್ಪೆ ಆಡೋಣ

ಚಿಕ್ಕಮ್ಮ ಕೊಡುವ ಚಿನ್ನಿ ಸಕ್ಕರೆ
ಅಕ್ಕರೆಯಿಂದ ತಿನ್ನೋಣ
ಚಿಕ್ಕಪ್ಪ ಆಡಿಸುವ ಕುರಿಮರಿ
ಆಟ ಸರದಿ ಸಾಲಲ್ಲಿ ಅಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.