ADVERTISEMENT

ಸಿಂಹ ಮಾನವ

​ಪ್ರಜಾವಾಣಿ ವಾರ್ತೆ
Published 27 ಜುಲೈ 2019, 19:30 IST
Last Updated 27 ಜುಲೈ 2019, 19:30 IST
ಸಿಂಹ ಮಾನವ
ಸಿಂಹ ಮಾನವ   

‘ಸಿಂಹ ಮಾನವ’ ಮೂರ್ತಿಯು ವಿಶ್ವದ ಅತ್ಯಂತ ಹಳೆಯ ಪ್ರಾತಿನಿಧಿಕ ಮೂರ್ತಿಗಳಲ್ಲಿ ಒಂದು. ಇದು 30 ಸೆ.ಮೀ. ಎತ್ತರ ಇದೆ. ಈ ಮೂರ್ತಿಯ ತಲೆ ಮತ್ತು ಕೈಗಳು ಸಿಂಹದ ತಲೆ, ಮುಂಗಾಲುಗಳನ್ನು ಹೋಲುತ್ತವೆ. ದೇಹದ ಇತರ ಅಂಗಗಳು ಮನುಷ್ಯನ ಅಂಗಗಳನ್ನು ಹೋಲುತ್ತವೆ.

ಇದು ಅಂದಾಜು 40 ಸಾವಿರ ವರ್ಷಗಳಷ್ಟು ಹಳೆಯದು ಎನ್ನಲಾಗಿದೆ. ಇದನ್ನು ದೊಡ್ಡ ದಂತವೊಂದನ್ನು ಬಳಸಿ ಕೆತ್ತಲಾಗಿದೆ. ಈ ಮೂರ್ತಿಯು ಚೂರುಗಳು 1939ರಲ್ಲಿ ಮೊದಲು ಪತ್ತೆಯಾದವು. ಇವು ಪತ್ತೆಯಾಗಿದ್ದು ಜರ್ಮನಿಯ ಲೋನ್‌ ಕಣಿವೆಯ ಹಾಲೆನ್‌ಸ್ಟೀನ್‌–ಸ್ಟ್ಯಾಡೆಲ್‌ ಗುಹೆಯಲ್ಲಿ. ಚೂರುಗಳು ಪತ್ತೆಯಾದ ಮೂವತ್ತು ವರ್ಷಗಳ ನಂತರ ದಂತದ ಈ ಚೂರುಗಳು ಒಂದು ಪ್ರತಿಮೆಯ ತುಂಡುಗಳು ಎಂಬುದನ್ನು ಪುರಾತತ್ವ ಶಾಸ್ತ್ರಜ್ಞರು ಕಂಡುಕೊಂಡರು. 2009ರಲ್ಲಿ ಇನ್ನಷ್ಟು ಚೂರುಗಳು ಸಿಕ್ಕವು. ಅವುಗಳನ್ನೆಲ್ಲ ಸೇರಿಸಿ ಮೂರ್ತಿಯನ್ನು ಪುನರ್‌ ರೂಪಿಸಲಾಯಿತು. ಈಗ ಇರುವ ಈ ಮೂರ್ತಿಯು ಮುನ್ನೂರಕ್ಕೂ ಹೆಚ್ಚಿನ ಚೂರುಗಳನ್ನು ಹೊಂದಿದೆ. ಹೀಗಿದ್ದರೂ ಈ ಮೂರ್ತಿಯ ಮುಂಭಾಗದ ಎಲ್ಲ ಚೂರುಗಳು ಸಿಕ್ಕಿಲ್ಲ.

ಇದು ಸಿಂಹದ ಮುಖವಾಡ ತೊಟ್ಟ ಮನುಷ್ಯನನ್ನು ಪ್ರತಿನಿಧಿಸುತ್ತದೆಯೋ ಅಥವಾ ಅರ್ಧ ಮನುಷ್ಯ ಹಾಗೂ ಇನ್ನರ್ಧ ಸಿಂಹದ ದೇಹ ಹೊಂದಿರುವ ಪೌರಾಣಿಕ ಪಾತ್ರವೊಂದನ್ನು ಪ್ರತಿನಿಧಿಸುತ್ತದೆಯೋ ಎಂಬುದು ಇನ್ನೂ ಖಚಿತವಾಗಿಲ್ಲ. ಇದನ್ನು ಜರ್ಮನಿಯ ಅಲ್ಮರ್ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.