ADVERTISEMENT

ಬಿಎಂಡಬ್ಲ್ಯು ಎಂ4 ಕಾಂಪಿಟಿಷನ್‌ ಕೂಪೆ ಬಿಡುಗಡೆ: ಬೆಲೆ ₹ 1.43 ಕೋಟಿ

ಪಿಟಿಐ
Published 10 ಫೆಬ್ರುವರಿ 2022, 15:41 IST
Last Updated 10 ಫೆಬ್ರುವರಿ 2022, 15:41 IST
ಎಂ4 ಕಾಂಪಿಟಿಷನ್‌ ಕೂಪೆ
ಎಂ4 ಕಾಂಪಿಟಿಷನ್‌ ಕೂಪೆ   

ನವದೆಹಲಿ: ಐಷಾರಾಮಿ ಕಾರು ತಯಾರಿಸುವ ಬಿಎಂಡಬ್ಲ್ಯು ಗ್ರೂಪ್‌ ಇಂಡಿಯಾ, ದೇಶದ ಮಾರುಕಟ್ಟೆಗೆ ಎಂ4 ಕಾಂಪಿಟಿಷನ್‌ ಕೂಪೆ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆಯು ₹ 1.43 ಕೋಟಿ ಇದೆ.

ಇದು 3 ಲೀಟರ್‌ ಪೆಟ್ರೋಲ್‌ ಎಂಜಿನ್‌ ಹೊಂದಿದ್ದು, ನಿಂತ ಸ್ಥಿತಿಯಿಂದ 3.5 ಸೆಕೆಂಡ್‌ಗಳಲ್ಲಿ ಗಂಟೆಗೆ 100 ಕಿಲೋ ಮೀಟರ್ ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿಯು ತಿಳಿಸಿದೆ.

ಹೊಸ ಬಿಎಂಡಬ್ಲ್ಯು ಎಂ4, ವಿಶಿಷ್ಟ ಸಂಯೋಜನೆಗಳೊಂದಿಗೆ ಟ್ರ್ಯಾಕ್ ಮತ್ತು ಸ್ಟ್ರೀಟ್‌ನಲ್ಲಿ ರಾಜಿಯಾಗದ ಅನುಭವವನ್ನು ನೀಡುತ್ತದೆ ಎಂದು ಬಿಎಂಡ‌ಬ್ಲ್ಯು ಗ್ರೂಪ್‌ ಇಂಡಿಯಾದ ಅಧ್ಯಕ್ಷ ವಿಕ್ರಂ ಪವ್ಹಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.