ADVERTISEMENT

ಥಾರ್‌: ನಾಲ್ಕೇ ದಿನಗಳಲ್ಲಿ 9 ಸಾವಿರ ಬುಕಿಂಗ್

ಪಿಟಿಐ
Published 6 ಅಕ್ಟೋಬರ್ 2020, 14:42 IST
Last Updated 6 ಅಕ್ಟೋಬರ್ 2020, 14:42 IST
ಹೊಸ ಥಾರ್
ಹೊಸ ಥಾರ್   

ನವದೆಹಲಿ: ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯ ಹೊಸ ಎಸ್‌ಯುವಿ ಥಾರ್‌ ಬಿಡುಗಡೆ ಆದ ನಾಲ್ಕು ದಿನಗಳಲ್ಲಿಯೇ ಒಂಬತ್ತು ಸಾವಿರ ಬುಕಿಂಗ್‌ ಆಗಿದೆ.

‘ಮೊದಲ ಹಂತದಲ್ಲಿ 18 ನಗರಗಳಲ್ಲಿ ಮಾತ್ರವೇ ಟೆಸ್ಟ್‌ ಡ್ರೈವ್‌ ಸೌಲಭ್ಯ ನೀಡಲಾಗಿದೆ. ಹೀಗಿದ್ದರೂ, ಇಷ್ಟೊಂದು ಸಂಖ್ಯೆಯಲ್ಲಿ ಬುಕಿಂಗ್ ಬಂದಿರುವುದು ಈ ಮಾದರಿಯ ಕಾರುಗಳ ವಿಚಾರದಲ್ಲಿ ಒಂದು ದಾಖಲೆಯೇ ಸರಿ’ ಎಂದು ಕಂಪನಿ ಹೇಳಿದೆ. ಥಾರ್‌ ಬೆಲೆ ₹ 9.8 ಲಕ್ಷದಿಂದ ₹ 13.75 ಲಕ್ಷದವರೆಗಿದೆ (ಎಕ್ಸ್‌ ಷೋರೂಂ).

ದೇಶದ ಇತರೆಡೆಗಳಲ್ಲೂ ಆದಷ್ಟು ಬೇಗ ಟೆಸ್ಟ್ ಡ್ರೈವ್ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಕಂಪನಿ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.