ADVERTISEMENT

ಟಿವಿಎಸ್‌ ಅಪಾಚೆ ಆರ್‌ಟಿಎಕ್ಸ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 19:46 IST
Last Updated 17 ಅಕ್ಟೋಬರ್ 2025, 19:46 IST
ಟಿವಿಎಸ್‌ ಮೋಟರ್ ಕಂಪನಿ, ತನ್ನ ಹೊಸ ಟಿವಿಎಸ್‌ ಅಪಾಚೆ ಆರ್‌ಟಿಎಕ್ಸ್ ಬಿಡುಗಡೆ ಮಾಡಿದೆ
ಟಿವಿಎಸ್‌ ಮೋಟರ್ ಕಂಪನಿ, ತನ್ನ ಹೊಸ ಟಿವಿಎಸ್‌ ಅಪಾಚೆ ಆರ್‌ಟಿಎಕ್ಸ್ ಬಿಡುಗಡೆ ಮಾಡಿದೆ   

ಬೆಂಗಳೂರು: ವಾಹನ ತಯಾರಿಕಾ ಕಂಪನಿ ಟಿವಿಎಸ್‌ ಮೋಟರ್, ತನ್ನ ಹೊಸ ದ್ವಿಚಕ್ರ ವಾಹನ ‘ಟಿವಿಎಸ್‌ ಅಪಾಚೆ ಆರ್‌ಟಿಎಕ್ಸ್’ ಬಿಡುಗಡೆ ಮಾಡಿದೆ. ಈ ಮೂಲಕ ಕಂಪನಿಯು ಅಡ್ವೆಂಚರ್‌ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿದೆ.

ಟಿವಿಎಸ್‌ ಅಪಾಚೆ ಆರ್‌ಟಿಎಕ್ಸ್‌ನ ಪರಿಚಯಾತ್ಮಕ ಬೆಲೆ ₹1.99 ಲಕ್ಷ. ಹೊಸ ವಾಹನವು ಅಡ್ವೆಂಚರ್ ದ್ವಿಚಕ್ರ ವಾಹನ ಸವಾರಿ ಕ್ಷೇತ್ರದಲ್ಲಿ ಸಂಚಲನ ಮೂಡಿಸಲು ರೂಪುಗೊಂಡಿದೆ ಎಂದು ಕಂಪನಿ ಹೇಳಿದೆ.

ಅಡ್ವೆಂಚರ್‌ ಬೈಕ್‌ ಸವಾರಿ ಪ್ರಿಯರಿಗೆ ಮತ್ತು ಪ್ರವಾಸಿಗರಿಗಾಗಿ ಈ ದ್ವಿಚಕ್ರ ವಾಹನ ರೂಪಿಸಲಾಗಿದೆ. ಇದು ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದ್ದು, ನೆಕ್ಸ್ಟ್‌ಜೆನ್ ಟಿವಿಎಸ್‌ ಆರ್‌ಟಿ-ಎಕ್ಸ್‌ಡಿ4 ಎಂಜಿನ್ ಪ್ಲಾಟ್‌ ಫಾರ್ಮ್ ಮೇಲೆ ನಿರ್ಮಿಸಲಾದ ಮೊದಲ ವಾಹನ ಎಂದು ಕಂಪನಿ ತಿಳಿಸಿದೆ.

ADVERTISEMENT

ಪ್ರಮುಖ ವೈಶಿಷ್ಟ್ಯಗಳು: 4 ರೈಡ್ ಮೋಡ್‌ಗಳು (ಅರ್ಬನ್, ರೇನ್, ಟೂರ್ ಮತ್ತು ರ‍್ಯಾಲಿ), ಬ್ಲೂಟೂತ್ ಸಂಪರ್ಕ ಹೊಂದಿರುವ 5 ಇಂಚಿನ ಟಿಎಫ್‌ಟಿ ಕ್ಲಸ್ಟರ್‌, ಡಿಆರ್‌ಎಲ್‌ಗಳೊಂದಿಗೆ ಕ್ಲಾಸ್- ಡಿ ಹೆಡ್‌ಲ್ಯಾಂಪ್, ಕ್ರೂಸ್ ಕಂಟ್ರೋಲ್, ಲೀನಿಯರ್ ಟ್ರಾಕ್ಷನ್ ಕಂಟ್ರೋಲ್, 5- ವೇ ಬ್ಲೂಟೂತ್‌ನೊಂದಿಗೆ ಮ್ಯಾಪ್ ಮಿರರಿಂಗ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಬಿಟಿಓ) ಸೇರಿ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. 

ಈ ದ್ವಿಚಕ್ರ ವಾಹನ 5 ಬಣ್ಣದ ಆಯ್ಕೆಗಳು ಮತ್ತು ಮೂರು ವೇರಿಯಂಟ್‌ಗಳಲ್ಲಿ ಇದೆ ಎಂದು ಕಂಪನಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.