ADVERTISEMENT

ಭರವಸೆಯ ಬಿಎಂಡಬ್ಲ್ಯೂ 8 ಸಿರೀಸ್‌ ಕಾರು...

ರಾಹುಲ ಬೆಳಗಲಿ
Published 12 ಸೆಪ್ಟೆಂಬರ್ 2019, 8:36 IST
Last Updated 12 ಸೆಪ್ಟೆಂಬರ್ 2019, 8:36 IST
   

ಹೊಸ ಬಗೆಯ ವಾಹನಗಳ ಕುರಿತು ಆಸಕ್ತಿ ಹೊಂದಿದವರಿಗೆ ಇಲ್ಲಿದೆ ಸಂತಸದ ಸುದ್ದಿ. ಹಲವು ಕಂಪನಿಗಳು ನವೀನ ಮಾದರಿಯ ಕಾರುಗಳನ್ನು ಪರಿಚಯಿಸುತ್ತಿದ್ದು, ತೀವ್ರ ಪೈಪೋಟಿ ಏರ್ಪಟ್ಟಿದೆ. ಬಿಎಂಡಬ್ಲ್ಯೂ ಕಂಪೆನಿಯು ವಿಶಿಷ್ಟ ರೀತಿಯ ಕಾರನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಅವರ ಬಿಎಂಡಬ್ಲ್ಯೂ 8 ಸಿರೀಸ್‌ ಕಾರು ಹೊಸ ಭರವಸೆಗೆ ಕಾರಣವಾಗಿದೆ.

ಬಿಎಂಡಬ್ಲ್ಯೂ 8 ಸಿರೀಸ್ ಕಾರು ಇನ್ನೂ ಭಾರತ ಪ್ರವೇಶಿಸಿಲ್ಲ. ಅತ್ಯಾಧುನಿಕ ವಿನ್ಯಾಸ ಹೊಂದಿರುವ ಈ ಕಾರು 2019ರ ಡಿಸೆಂಬರ್‌ನಲ್ಲಿ ಭಾರತಕ್ಕೆ ಕಾಲಿರಿಸಿರುವ ನಿರೀಕ್ಷೆಯಿದ್ದು, ತೀವ್ರ ಕುತೂಹಲ ಮೂಡಿಸಿದೆ. ಒಂದು ವೇಳೆ ಈ ಕಾರು ಭಾರತೀಯ ಮಾರುಕಟ್ಟೆಗೆ ಪರಿಚಿತವಾದಲ್ಲಿ, ದೊಡ್ಡ ಪ್ರಮಾಣದ ಸಂಚಲನ ಮಾಡುವುದಂತೂ ನಿಶ್ಚಿತ.

ಭಾರತ ಹೊರತುಪಡಿಸಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕಾರು ವಾಹನ ಪ್ರಿಯರ ಮೆಚ್ಚುಗೆ ಗಳಿಸಿದೆ. ಜರ್ಮನಿಯ ಡಿಂಗೆಲ್ಫಿಂಗ್‌ನಲ್ಲಿ ಇರುವ ಬಿಎಂಡಬ್ಲ್ಯೂ ಕಂಪನಿಯಲ್ಲಿ ತಯಾರಾದ ಈ ಕಾರು 6 ಸಿರೀಸ್ ಸರಣಿಗೆ ಜೀವ ತುಂಬಿದೆ.

ADVERTISEMENT

ಲೈಟ್‌ವೇಯ್ಟ್‌ ಉಳ್ಳ ಈ ಕಾರು ಸ್ಟೀಲ್, ಪ್ಲಾಸ್ಟಿಕ್, ಅಲ್ಯುಮಿನಿಯಂ, ಕಾರ್ಬನ್ ಫೈಬರ್ ಮುಂತಾದವು ಒಳಗೊಂಡಿದೆ. ಎರಡು ಎಂಜಿನ್‌ಗಳನ್ನು ಹೊಂದಿರುವ ಈ ಕಾರು (ಎಂ850ಐ) ವಿಶಿಷ್ಟತೆಯಿಂದ ಕೂಡಿದೆ. 4.4 ಲೀಟರ್ ಎಂಟು ಸಿಲಿಂಡರ್ ಸಾಮರ್ಥ್ಯ‌ದಪೆಟ್ರೋಲ್ ಎಂಜಿನ್ ಹೊಂದಿದೆ. ಈ ಕಾರು (840ಡಿ) ಆರು ಸಿಲಿಂಡರ್ ಸಾಮರ್ಥ್ಯ‌ದ ಡೀಸಲ್ ಮೋಟರ್ ಹೊಂದಿದೆ. ಸದ್ಯಕ್ಕೆ ಇದರ ಅಂದಾಜು ಬೆಲೆ ₹ 1.05 ಕೋಟಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.