ನವದೆಹಲಿ: ಐಷಾರಾಮಿ ಕಾರು ತಯಾರಿಸುವ ಬಿಎಂಡಬ್ಲ್ಯು ಕಂಪನಿಯು ತನ್ನ ಎಸ್ಯುವಿ ಕೂಪೆ ಎಕ್ಸ್ 4ನ ಸುಧಾರಿತ ಆವೃತ್ತಿಯನ್ನು ಬಿಡುಗಡೆ ಮಾಡಿರುವುದಾಗಿ ಗುರುವಾರ ತಿಳಿಸಿದೆ. ಇದರ ಎಕ್ಸ್ ಷೋರೂಂ ಬೆಲೆ ₹ 70.5 ಲಕ್ಷದಿಂದ ಆರಂಭ ಆಗುತ್ತದೆ.
ಚೆನ್ನೈನಲ್ಲಿ ಇರುವ ಘಟಕದಲ್ಲಿ ಈ ಎಸ್ಯುವಿ ತಯಾರಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಕಂಪನಿಯ ಎಲ್ಲ ವಿತರಣ ಕೇಂದ್ರಗಳಲ್ಲಿ ಗುರುವಾರದಿಂದ ಲಭ್ಯವಿದೆ ಎಂದು ಕಂಪನಿಯು ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.