ADVERTISEMENT

ವಾಹನ ಲೋಕದ ಭವಿಷ್ಯ ‘ಇವಿ’

​ಕೇಶವ ಜಿ.ಝಿಂಗಾಡೆ
Published 19 ಫೆಬ್ರುವರಿ 2020, 19:30 IST
Last Updated 19 ಫೆಬ್ರುವರಿ 2020, 19:30 IST
ಫೋರ್ಸ್‌ ಮೋಟರ್ಸ್‌ನ ಗುರ್ಖಾ
ಫೋರ್ಸ್‌ ಮೋಟರ್ಸ್‌ನ ಗುರ್ಖಾ   

ವೈವಿಧ್ಯಮಯ ಕಾರ್‌ಗಳನ್ನು ಪ್ರದರ್ಶಿಸಿ ಗಮನ ಸೆಳೆದ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ‘ಫ್ಯೂಚರೊ–ಇ’ ಹೆಸರಿನ ಭವಿಷ್ಯದ ವಿದ್ಯುತ್ ಚಾಲಿತ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಅನಾವರಣಗೊಳಿಸುವುದರ ಮೂಲಕ ಮೇಳಕ್ಕೆ ಚಾಲನೆ ನೀಡಿ ಸಂಚಲನ ಮೂಡಿಸಿತು.

ಮಾರುತಿ ಸುಜುಕಿ ಇಂಡಿಯಾ
ವೈವಿಧ್ಯಮಯ ಕಾರ್‌ಗಳನ್ನು ಪ್ರದರ್ಶಿಸಿ ಗಮನ ಸೆಳೆದ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ‘ಫ್ಯೂಚರೊ–ಇ’ ಹೆಸರಿನ ಭವಿಷ್ಯದ ವಿದ್ಯುತ್ ಚಾಲಿತ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಅನಾವರಣಗೊಳಿಸುವುದರ ಮೂಲಕ ಮೇಳಕ್ಕೆ ಚಾಲನೆ ನೀಡಿ ಸಂಚಲನ ಮೂಡಿಸಿತು. ಅಷ್ಟೇ ಅಲ್ಲ, 2020 ದಶಕದಲ್ಲಿನ ಕಂಪನಿಯ ವಿದ್ಯುತ್ ಚಾಲಿತ ವಾಹನಗಳಿಗೆ ಮುನ್ನುಡಿಯನ್ನೂ ಬರೆಯಿತು. ‘ಎಸ್‌ಯುವಿ’ ವಿಟಾರಾ ಬ್ರೆಜಾದ ಸಂಪೂರ್ಣ ಹೊಸ ಅವತರಣಿಕೆಯನ್ನೂ ಅನಾವರಣಗೊಳಿಸಿತು.

ಟಾಟಾ ಮೋಟರ್ಸ್‌
ಅತಿ ಹೆಚ್ಚಿನ ಪ್ರದರ್ಶನ ಸ್ಥಳ ವ್ಯಾಪಿಸಿದ್ದ ಕಂಪನಿಗಳಲ್ಲಿ ಒಂದಾಗಿದ್ದ ಟಾಟಾ ಮೋಟರ್ಸ್‌, ತನ್ನ ಭವಿಷ್ಯದ ವಿದ್ಯುತ್‌ ಚಾಲಿತ ವಾಹನ ಮತ್ತು ಇತ್ತೀಚೆಗಷ್ಟೆ ಮಾರುಕಟ್ಟೆಗೆ ಪರಿಚಯಿಸಿರುವ ಆಲ್ಟ್ರೋಝ್‌ ಹ್ಯಾಚ್‌ ಮತ್ತು ನೆಕ್ಸಾನ್‌ ಇವಿ ಪ್ರದರ್ಶಿಸಿತ್ತು. ಸದ್ಯದಲ್ಲೇ ಪರಿಚಯಿಸಲಿರುವ ಮಿನಿ ಎಚ್‌ಬಿಎಕ್ಸ್‌, 7 ಸೀಟುಗಳ ಗ್ರೇವಿಟಾಸ್‌ಗಳು ಗಮನ ಸೆಳೆದವು. ಈ ವರ್ಷ ಈ ಎರಡೂ ಕಾರ್‌ಗಳು ಪೇಟೆಗೆ ಬರಲಿವೆ.

ADVERTISEMENT

ಕಿಯಾ ಮೋಟರ್ಸ್‌ನ ಕಾರ್ನಿವಲ್‌
ಮಲ್ಟಿ ಪರ್ಪಸ್‌ ವೆಹಿಕಲ್‌ (ಎಂಪಿವಿ) ಕಾರ್ನಿವಲ್‌ನ ಸೌಲಭ್ಯಗಳನ್ನು ಪರಿಚಯಿಸಿಕೊಳ್ಳಲು ವೀಕ್ಷಕರಲ್ಲಿ ಹೆಚ್ಚಿನ ಆಸಕ್ತಿ ಕಂಡು ಬಂದಿತು. ವಾಹನ ಪ್ರಿಯರು ಕುತೂಹಲದಿಂದ ಎದುರು ನೋಡುತ್ತಿರುವ ಮಿನಿ ಎಸ್‌ಯುವಿ ಸೋನೆಟ್‌ ಕೂಡ ಗಮನ ಸೆಳೆದಿತ್ತು. ಪೆಟ್ರೋಲ್‌ ಮತ್ತು ಡೀಸೆಲ್‌ ಮಾದರಿಯ ಇದು ಹುಂಡೈನ ವೆನ್ಯೂ ಮತ್ತು ಮಾರುತಿಯ ಬ್ರೆಜಾಗೆ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದೆ.

ಹುಂಡೈ: ಹೊಸ ತಲೆಮಾರಿನ ಕ್ರೇಟಾ
ಹುಂಡೈನ ಹೊಸ ತಲೆಮಾರಿನ ಕ್ರೇಟಾವನ್ನು ಬಾಲಿವುಡ್‌ ನಟ ಶಾರೂಖ್‌ ಖಾನ್‌ ಅನಾವರಣ ಮಾಡುವಾಗ ವಾಹನ ಪ್ರಿಯರು ಕಿಕ್ಕಿರದು ಸೇರಿದ್ದರು.

ರೆನೊ
ಕಂಪನಿಯು ಇತ್ತೀಚಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಟ್ರೈಬರ್‌ನ ಸ್ವಯಂಚಾಲಿತ ಕಾರ್ ಅನ್ನು ಅನಾವರಣಗೊಳಿಸಿತು. ಜತೆಗೆ, ಸಂಪೂರ್ಣ ವಿದ್ಯುತ್‌ ಚಾಲಿತ ಕಾರ್‌ಗಳನ್ನೂ ಅನಾವರಣಗೊಳಿಸಿತು.

ಫೋಕ್ಸ್‌ವ್ಯಾಗನ್‌
ಜರ್ಮನಿಯ ಫೋಕ್ಸ್‌ವ್ಯಾಗನ್‌ ತನ್ನ ’ಟಿ–ರಾಕ್‌ ಎಸ್‌ಯುವಿ ಅನಾವರಣಗೊಳಿಸಿತಲ್ಲದೇ ಬುಕಿಂಗ್‌ಗೆ ಚಾಲನೆಯನ್ನೂ ನೀಡಿತು. ಕ್ರೇಟಾ ಮತ್ತು ಸೆಲ್ಟೋಸ್‌ಗೆ ಸ್ಪರ್ಧೆ ನೀಡಲಿರುವ ಸ್ಥಳೀಯವಾಗಿ ಜೋಡಿಸಿರುವ ಟೈಗನ್‌ ಎಸ್‌ಯುವಿಯನ್ನು ಪ್ರದರ್ಶಿಸಿತು.

ಮರ್ಸಿಡಿಸ್‌ ಬೆಂಜ್‌
ಮೇಳದಲ್ಲಿದ್ದ ಏಕೈಕ ವಿಲಾಸಿ ಕಾರ್‌ ತಯಾರಿಕಾ ಕಂಪನಿ ಮರ್ಸಿಡಿಸ್‌ ಬೆಂಜ್‌ ಭವಿಷ್ಯದ ಎಎಂಜಿ ಜಿಟಿ 635, ಜಿಎಲ್‌ಎ ಎಸ್‌ಯುವಿ, ಎ–ಕ್ಲಾಸ್‌ ಸೆಡಾನ್‌ಗಳನ್ನು ಪ್ರದರ್ಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.