ADVERTISEMENT

ಸೆಕೆಂಡ್‌ ಹ್ಯಾಂಡ್‌ ಕಾರು ವಹಿವಾಟಿಗೆ ಪೋರ್ಷೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 19:30 IST
Last Updated 19 ಫೆಬ್ರುವರಿ 2020, 19:30 IST
ಪೋರ್ಷೆ ಕ್ಯಾರೆರ್ರಾ ಎಸ್‌
ಪೋರ್ಷೆ ಕ್ಯಾರೆರ್ರಾ ಎಸ್‌   

ಐಷಾರಾಮಿ ಸ್ಪೋರ್ಟ್ಸ್‌ ಕಾರುಗಳನ್ನು ತಯಾರಿಸುವ ಪೋರ್ಷೆ ಕಂಪನಿಯು ಭಾರತದಲ್ಲಿ ಸೆಕೆಂಡ್‌ ಹ್ಯಾಂಡ್‌ ಕಾರುಗಳ ಮಾರಾಟದ ವಹಿವಾಟಿಗೆ ಬರಲು ನಿರ್ಧರಿಸಿದೆ.

ಭಾರತದಲ್ಲಿ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಅಲ್ಪಾವಧಿಗೆ ಈ ವಹಿವಾಟಿಗೆ ಬರಲಾಗುತ್ತಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಸೆಕೆಂಡ್‌ ಹ್ಯಾಂಡ್‌ ಕಾರುಗಳ ಮಾರಾಟದ ಬಗ್ಗೆ ಬಹಳ ಗಂಭೀರವಾಗಿ ಚಿಂತನೆ ನಡೆಸಲಾಗುತ್ತಿದೆ. ನಮ್ಮ ಬಳಿ 3,500ಕ್ಕೂ ಅಧಿಕ ಕಾರುಗಳಿಗೆ’ ಎಂದು ಪೋರ್ಷೆ ಇಂಡಿಯಾದ ನಿರ್ದೇಶಕ ಪವನ್‌ ಶೆಟ್ಟಿ ತಿಳಿಸಿದ್ದಾರೆ.

ADVERTISEMENT

ಜಾಗತಿಕ ಮಟ್ಟದಲ್ಲಿ, ಪೋರ್ಷೆ ಅಪ್ರೂವ್ಡ್‌ ಬ್ರ್ಯಾಂಡ್‌ ಮೂಲಕ ಸೆಕೆಂಡ್‌ ಹ್ಯಾಂಡ್‌ ಕಾರುಗಳನ್ನು ಮಾರಾಟ ಮಾಡುತ್ತಿದೆ. ‘9 ವರ್ಷಗಳವರೆಗೆ ವಾರಂಟಿ ನೀಡುತ್ತಿರುವ ಕೆಲವೇ ಬ್ರ್ಯಾಂಡ್‌ಗಳಲ್ಲಿ ಪೋರ್ಷೆ ಸಹ ಸೇರಿಕೊಂಡಿದೆ. ಇಷ್ಟು ವರ್ಷಗಳ ವಾರಂಟಿ ನೀಡುವುದೆಂದರೆ ಅದು ಕಾರಿನ ಗುಣಮಟ್ಟವನ್ನು ತಿಳಿಸುತ್ತದೆ. ಆಮದು ಸುಂಕ ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಗುಣಮಟ್ಟದ ಸೆಕೆಂಡ್‌ ಹ್ಯಾಂಡ್‌ ಕಾರುಗಳಿಗೆ ಉತ್ತಮ ಬೇಡಿಕೆ ಬರಲಿದೆ’ ಎಂದಿದ್ದಾರೆ.

‘2020ಕ್ಕೆ ಮಾರಾಟ ಪ್ರಗತಿಯ ಬಗ್ಗೆ ಖಚಿತವಾಗಿ ಹೇಳುವುದು ಕಷ್ಟ. ಆದರೆ, 2019ರಲ್ಲಿ ಮಾರಾಟವಾಗಿರುವುದಕ್ಕಿಂತಲೂ ಹೆಚ್ಚಿನ ಮಾರಾಟ ಮಾಡುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಏಕೆಂದರೆ 2019ರಲ್ಲಿ ವಾಹನ ಉದ್ಯಮ ಬಹಳಷ್ಟು ಸವಾಲುಗಳನ್ನು ಎದುರಿಸಿದೆ’ ಎಂದು ತಿಳಿಸಿದ್ದಾರೆ.

ಮಾರಾಟ
2019 350
2018 348

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.