ADVERTISEMENT

ಟಾಟಾ ಮೋಟರ್ಸ್‌ನಿಂದ ಸಂಚಾರಿ ಷೋರೂಂ ‘ಅನುಭವ್‌’

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2022, 13:20 IST
Last Updated 3 ಮಾರ್ಚ್ 2022, 13:20 IST
ಸಂಚಾರಿ ಷೋರೂಂ ಅನುಭವ್
ಸಂಚಾರಿ ಷೋರೂಂ ಅನುಭವ್   

ಬೆಂಗಳೂರು: ಗ್ರಾಮೀಣ ಪ್ರದೇಶಗಳನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ತಲುಪುವ ಉದ್ದೇಶದಿಂದ ‘ಅನುಭವ್‌’ ಎನ್ನುವ ಸಂಚಾರಿ ಷೋರೂಂ ಅನ್ನು ಟಾಟಾ ಮೋಟರ್ಸ್‌ ಆರಂಭಿಸಿದೆ.

ಗ್ರಾಮೀಣ ಭಾಗಗಳಲ್ಲಿ ಕಂಪನಿಯ ಬ್ರ್ಯಾಂಡ್‌ ಬಗ್ಗೆ ಜಾಗೃತಿ ಮೂಡಿಸಲು 103 ಸಂಚಾರಿ ಷೋರೂಂಗಳು ಕಾರ್ಯನಿರ್ವಹಿಸಲಿವೆ. ಹೊಸ ಕಾರುಗಳು ಮತ್ತು ಎಸ್‌ಯುವಿಗಳು, ಬಿಡಿಭಾಗಗಳು, ಹಣಕಾಸು ಯೋಜನೆಗಳು, ಟೆಸ್ಟ್‌ಡ್ರೈವ್‌ ಮತ್ತು ವಿನಿಮಯ ಕುರಿತಾಗಿ ಗ್ರಾಹಕರಿಗೆ ತಿಳಿಸಲು ಆಯಾ ಪ್ರದೇಶಗಳಲ್ಲಿ ಲಭ್ಯ ಇರುವ ವಿತರಕರಿಗೆ ಈ ಸಂಚಾರಿ ಷೋರೂಂಗಳು ನೆರವಾಗಲಿವೆ ಎಂದು ಕಂಪನಿಯು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT