ADVERTISEMENT

ಅರ್ಲಿಸ್ಯಾಲರಿ: ಶಾಲಾ ಶುಲ್ಕ ಸಾಲ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2018, 19:30 IST
Last Updated 27 ಏಪ್ರಿಲ್ 2018, 19:30 IST

ಬೆಂಗಳೂರು: ಶೈಕ್ಷಣಿಕ ಹಣಕಾಸು ಸಂಸ್ಥೆಯಾಗಿರುವ ಅವನ್ಸೆ ಫೈನಾನ್ಷಿಯಲ್ ಸರ್ವೀಸಸ್‍, ಶಾಲಾ  ಶುಲ್ಕ ಪಾವತಿಸುವ ಡಿಜಿಟಲ್‌ ಸೇವೆ ‘ಫೀಸ್’ ಜಾರಿಗೆ ತರಲು, ಹಣಕಾಸು ತಂತ್ರಜ್ಞಾನ ಸಂಸ್ಥೆ ಅರ್ಲಿಸ್ಯಾಲರಿ ಜತೆ ಒಪ್ಪಂದ ಮಾಡಿಕೊಂಡಿದೆ.

‘ಪೋಷಕರು ಸುಲಭ ಕಂತುಗಳ ಸಾಲ ಸೌಲಭ್ಯ ಪಡೆದುಕೊಂಡು ಮಕ್ಕಳ ಶಿಕ್ಷಣ ಶುಲ್ಕವನ್ನು ಅರ್ಲಿಸ್ಯಾಲರಿ ಆ್ಯಪ್ ಮೂಲಕ ಸುಲಭವಾಗಿ ಪಾವತಿಸಬಹುದಾಗಿದೆ. ‘ಫೀಸ್‌’ ಸೌಲಭ್ಯದಡಿ ₹ 50 ಸಾವಿರದಿಂದ ₹ 3 ಲಕ್ಷದವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. ಈ ಸಾಲವನ್ನು 3 ರಿಂದ 6 ತಿಂಗಳಲ್ಲಿ ಮರು ಪಾವತಿ ಮಾಡಬಹುದಾಗಿದೆ’ ಎಂದು ಅರ್ಲಿಸ್ಯಾಲರಿಯ ಸಿಇಒ ಅಕ್ಷಯ್ ಮೆಹ್ರೋತ್ರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT