ADVERTISEMENT

ಅವಧಿಗೂ ಮುನ್ನ 100 ಗಿಗಾವಾಟ್‌ ಸೌರ ವಿದ್ಯುತ್‌ ಉತ್ಪಾದನೆ: ಸಚಿವ

ಪಿಟಿಐ
Published 7 ಏಪ್ರಿಲ್ 2018, 19:30 IST
Last Updated 7 ಏಪ್ರಿಲ್ 2018, 19:30 IST

ಕೋಲ್ಕತ್ತ: ‘2022ಕ್ಕೂ ಮೊದಲೇ 100 ಗಿಗಾವಾಟ್‌ ಸೌರ ವಿದ್ಯುತ್‌ ಉತ್ಪಾದನೆಯ ಗುರಿ ತಲುಪಲಾಗುವುದು’ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷ ವರ್ಧನ್‌ ತಿಳಿಸಿದ್ದಾರೆ.

‘ಹೊಸ ಸೌರ ಶಕ್ತಿ ನೀತಿಯಲ್ಲಿ ಕೇಂದ್ರ ಸರ್ಕಾರ 2021–22ರ ವೇಳೆಗೆ ನವೀಕರಿಸಬಹುದಾದ ಇಂಧನ ಮೂಲಗಳಿಂದ 175 ಗಿಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಿದೆ. ಅದರಲ್ಲಿ 100 ಗಿಗಾವಾಟ್‌ನಷ್ಟು ಸೌರ ಶಕ್ತಿ ಇರಲಿದೆ’ ಎಂದು ಅವರು ಹೇಳಿದ್ದಾರೆ.

ಎನ್‌ಬಿ ಇನ್‌ಸ್ಟಿಟ್ಯೂಟ್‌ ಫರ್‌ ರೂರಲ್ ಟೆಕ್ನಾಲಜಿ ಮತ್ತು ವಿಕ್ರಂ ಸೋಲಾರ್ ಆಯೋಜಿಸಿದ್ದ ವಿಚಾರಗೋಷ್ಠಿಯ ಸಂದರ್ಭದಲ್ಲಿ ಅವರು ಮಾತನಾಡಿದರು.

ADVERTISEMENT

ಸೋಲಾರ್‌ ಪಾರ್ಕ್‌, ಬೃಹತ್‌ ಗ್ರಿಡ್‌ ಸಂಪರ್ಕವಿರುವ ಸೋಲಾರ್‌ ಘಟಕಗಳು, ಚಾವಣಿ ಸೋಲಾರ್‌ ಘಟಕ ಉತ್ಪಾದನೆಗೆ ಹೆಚ್ಚು ಪ್ರೋತ್ಸಾಹ ನೀಡಲು ನಿರ್ಧರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.