ADVERTISEMENT

ಆಧಾರ್‌ ಕೇಂದ್ರ ತೆರೆಯಲು ಬ್ಯಾಂಕ್‌ಗಳ ನಿರಾಸಕ್ತಿ

ಪಿಟಿಐ
Published 20 ಅಕ್ಟೋಬರ್ 2017, 19:30 IST
Last Updated 20 ಅಕ್ಟೋಬರ್ 2017, 19:30 IST

ನವದೆಹಲಿ (ಪಿಟಿಐ): ಶಾಖೆಗಳಲ್ಲಿ ಆಧಾರ್‌ ನೋಂದಣಿ ಕೇಂದ್ರ ತೆರೆಯಲು ಬ್ಯಾಂಕ್‌ಗಳು ನಿರಾಸಕ್ತಿ ತೋರಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಸರ್ಕಾರಿ ಮತ್ತು ಖಾಸಗಿ ವಲಯದ ಒಟ್ಟು 43 ಬ್ಯಾಂಕ್‌ಗಳಿವೆ. ಇವುಗಳ 15,300 ಶಾಖೆಗಳಲ್ಲಿ ಅಕ್ಟೋಬರ್‌ 31ರ ಒಳಗೆ ಆಧಾರ್‌ ನೋಂದಣಿ ಕೇಂದ್ರಗಳನ್ನು ತೆರೆಯುವಂತೆ ಸರ್ಕಾರ ಸೂಚನೆ ನೀಡಿದೆ. ಆದರೆ ಇದುವರೆಗೆ 2,300 ಶಾಖೆಗಳು ಮಾತ್ರವೇ ಈ ಸೌಲಭ್ಯ ಕಲ್ಪಿಸಿವೆ.

ಬ್ಯಾಂಕ್‌ಗಳು ಹೊಂದಿರುವ ಶಾಖೆಗಳಲ್ಲಿ ಶೇ 10 ರಷ್ಟು ಶಾಖೆಗಳಲ್ಲಿ ಆಧಾರ್ ನೋಂದಣಿ ಕೇಂದ್ರ ತೆರೆಯುವಂತೆ ಸರ್ಕಾರ ಸೂಚನೆ ನೀಡಿತ್ತು. ಅಕ್ಟೋಬರ್ 31ರ ಒಳಗೆ ಇದನ್ನು ಪಾಲಿಸದೇ ಇದ್ದರೆ ಆ ಬಳಿಕ ಪ್ರತಿ ಒಂದು ಶಾಖೆಯು ₹20 ಸಾವಿರದಂತೆ ದಂಡ ತೆರಬೇಕಾಗುತ್ತದೆ.

ADVERTISEMENT

ನೋಂದಣಿ ಕೇಂದ್ರಗಳನ್ನು ತೆರೆಯುವ ಬಗ್ಗೆ ಬ್ಯಾಂಕ್‌ಗಳಿಗೆ ಸೆಪ್ಟೆಂಬರ್‌ 31ರ ಗಡುವು ನೀಡಲಾಗಿತ್ತು. ನಂತರ ಅಕ್ಟೋಬರ್ 31ರವರೆಗೂ ವಿಸ್ತರಿಸಲಾಗಿದೆ. ಹೀಗಿದ್ದರೂ ಬ್ಯಾಂಕ್‌ಗಳು ನೋಂದಣಿ ಕೇಂದ್ರ ತೆರೆಯಲು ಆಸಕ್ತಿ ತೋರುತ್ತಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮತ್ತು ಮಾಹಿತಿ ದೃಢೀಕರಣಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬ್ಯಾಂಕ್‌ಗಳಲ್ಲಿ ಆಧಾರ್ ನೋಂದಣಿ ಕೇಂದ್ರ ತೆರೆಯುವ ನಿರ್ಧಾರ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.