ADVERTISEMENT

ಆರ್ಥಿಕ ಮುನ್ನೋಟ ತಗ್ಗಿಸಿದ ಎಡಿಬಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 19:30 IST
Last Updated 3 ಅಕ್ಟೋಬರ್ 2012, 19:30 IST

ನವದೆಹಲಿ (ಪಿಟಿಐ): ಜಾಗತಿಕ ಆರ್ಥಿಕ ಅಸ್ಥಿರತೆ, ಮುಂಗಾರು ವೈಫಲ್ಯ ಇತ್ಯಾದಿ ಸಂಗತಿಗಳಿಂದ ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ದೇಶದ ಆರ್ಥಿಕ ಮುನ್ನೋಟವನ್ನು ಶೇ 7ರಿಂದ ಶೇ 5.6ಕ್ಕೆ ತಗ್ಗಿಸಿದೆ.
 
ಕೇಂದ್ರ ಸರ್ಕಾರ ಇತ್ತೀಚೆಗೆ ಕೈಗೊಂಡಿರುವ ಆರ್ಥಿಕ ಸುಧಾರಣಾ ಕ್ರಮಗಳು ಹೂಡಿಕೆಗೆ ಉತ್ತೇಜನಕಾರಿಯಾಗಿವೆ. ಆದರೆ, ಜಾಗತಿಕ ಆರ್ಥಿಕ ಅಸ್ಥಿರತೆ ಇನ್ನೂ ಪ್ರಭಾವಿಯಾಗಿದೆ. ಜತೆಗೆ ಮುಂಗಾರು ವೈಫಲ್ಯದಿಂದ ಕೃಷಿ ಉತ್ಪಾದನೆ ಕುಸಿಯುವ ನಿರೀಕ್ಷೆ ಇದೆ ಎಂದು `ಎಡಿಬಿ~ ಏಷ್ಯಾ ಅಭಿವೃದ್ಧಿ ಮುನ್ನೋಟ -2012~ ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.