ADVERTISEMENT

ಆರ್ಥಿಕ ವೃದ್ಧಿ: ಬರಾಕ್ ಒಬಾಮ ಆಶಯ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 19:30 IST
Last Updated 22 ಸೆಪ್ಟೆಂಬರ್ 2011, 19:30 IST

ವಿಶ್ವಸಂಸ್ಥೆ (ಪಿಟಿಐ): ಜಾಗತಿಕ ಅರ್ಥ ವ್ಯವಸ್ಥೆಯ ಚೇತರಿಕೆಯು ನಿಧಾನವಾಗಿ ನಡೆಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ಆರ್ಥಿಕ ವೃದ್ಧಿ ದರ ಉತ್ತೇಜಿಸಲು ತಮ್ಮ ದೇಶವು ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳ  ಜತೆ ಕೆಲಸ ಮಾಡಲು ಸಿದ್ಧವಿರುವುದಾಗಿ ಪ್ರಕಟಿಸಿದ್ದಾರೆ.

`ನಮ್ಮೆಲ್ಲರ ಹಣೆಬರಹ ಪರಸ್ಪರ ಸಂಪರ್ಕ ಹೊಂದಿದೆ. ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ದೇಶಗಳು ಒಟ್ಟಿಗೆ ಬೆಳವಣಿಗೆ ಸಾಧಿಸಬಹುದು ಇಲ್ಲವೇ ಆರ್ಥಿಕ ಸಂಕಷ್ಟದ ಪ್ರಪಾತಕ್ಕೆ ಬೀಳಬಹುದು. ಮೂರು ವರ್ಷಗಳ ಹಿಂದಿನ ಹಣಕಾಸು ಬಿಕ್ಕಟ್ಟು ಈ ಮಾತನ್ನು ಸಾಬೀತುಪಡಿಸಿದೆ. ಈಗ ಮತ್ತೆ ವಿಶ್ವದ ಆರ್ಥಿಕತೆ   ಚೇತರಿಕೆಯು ಕುಂಟುತ್ತ ಸಾಗಿದೆ. ಅನೇಕರು ನಿರುದ್ಯೋಗಿಗಳಾಗಿದ್ದಾರೆ. 

ಇನ್ನೂ ಅನೇಕರು ದಿನನಿತ್ಯದ ಅಗತ್ಯಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. 2009ರಲ್ಲಿ  ಆರ್ಥಿಕ ಹಿಂಜರಿಕೆ ಹಿಮ್ಮೆಟ್ಟಿಸಲು ನಾವೆಲ್ಲ ಜತೆಯಾಗಿ ಕಾರ್ಯನಿರ್ವಹಿಸಿದ್ದೇವು. ಈಗ ಮತ್ತೆ ಅಂತಹ ಬಿಕ್ಕಟ್ಟು ನಿರ್ಮಾಣವಾಗಿದೆ.
 
ನಾವೆಲ್ಲ ತುರ್ತಾಗಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕಾಗಿದೆ. ಹೊಸ ಮಾರುಕಟ್ಟೆ ನಿರ್ಮಾಣಕ್ಕೆ ಇಂತಹ ಸಹಕಾರ ಅಗತ್ಯವಾಗಿದೆ~ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.