ADVERTISEMENT

ಇಂದಿನಿಂದ ಎಕ್ಸ್‌ಕಾನ್‌ ಮೇಳ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2017, 19:30 IST
Last Updated 11 ಡಿಸೆಂಬರ್ 2017, 19:30 IST
ಎಕ್ಸ್‌ಕಾನ್‌ ಅಧ್ಯಕ್ಷ ವಿ‍ಪಿನ್‌ ಸೋಂಧಿ ಮತ್ತು ಸಿಐಐ ಉಪ ಮಹಾ ನಿರ್ದೇಶಕ ವಿರೇಂದ್ರ ಗುಪ್ತ
ಎಕ್ಸ್‌ಕಾನ್‌ ಅಧ್ಯಕ್ಷ ವಿ‍ಪಿನ್‌ ಸೋಂಧಿ ಮತ್ತು ಸಿಐಐ ಉಪ ಮಹಾ ನಿರ್ದೇಶಕ ವಿರೇಂದ್ರ ಗುಪ್ತ   

ಬೆಂಗಳೂರು: ನಿರ್ಮಾಣ ಸಲಕರಣೆಗಳ ದಕ್ಷಿಣ ಏಷ್ಯಾದ ಅತಿದೊಡ್ಡ  ವ್ಯಾಪಾರ ಮೇಳ ‘ಎಕ್ಸ್‌ಕಾನ್’  ಮಂಗಳವಾರದಿಂದ ಐದು ದಿನಗಳ ಕಾಲ (ಡಿ. 12 ರಿಂದ ಡಿ. 16) ತುಮಕೂರು ರಸ್ತೆಯಲ್ಲಿನ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆಯಲಿದೆ.

ಈ ವ್ಯಾಪಾರ ಮೇಳದಲ್ಲಿ 925 ಪ್ರದರ್ಶಕರು ಮತ್ತು 275 ವಿದೇಶಿ ಕಂಪನಿಗಳು ಭಾಗವಹಿಸಲಿವೆ. ವಿವಿಧ ದೇಶಗಳ 40,000 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

‘ಮೇಳವನ್ನು ಕೇಂದ್ರೋದ್ಯಮಗಳ ಸಚಿವ ಅನಂತ್‌ ಜಿ ಗೀತೆ  ಅವರು ಉದ್ಘಾಟಿಸಲಿದ್ದಾರೆ. ರಾಜ್ಯ ಬೃಹತ್ ಕೈಗಾರಿಕಾ ಸಚಿವ ಆರ್‌.ವಿ ದೇಶಪಾಂಡೆ, ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌  ಭಾಗವಹಿಸಲಿದ್ದಾರೆ’ ಎಂದು ಎಕ್ಸ್‌ಕಾನ್‌ ಅಧ್ಯಕ್ಷ ವಿಪಿನ್‌ ಸೋಂಧಿ ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಆಶ್ರಯದಲ್ಲಿ ಈ ಮೇಳ ಆಯೋಜಿಸಲಾಗಿದೆ.

ADVERTISEMENT

‘ನಿರ್ಮಾಣ ಸಲಕರಣೆ ತಯಾರಿಕೆ ಉದ್ಯಮದ ಪ್ರಗತಿಯು 2011ರಿಂದ ಇಳಿಕೆ ಹಾದಿಯಲ್ಲಿತ್ತು.  ಈ ವರ್ಷ ಉದ್ಯಮದ ಅಭಿವೃದ್ಧಿಯು ಈ ಹಿಂದಿನ  ಶೇ 14ರಷ್ಟು ವೇಗ ಮೀರಲಿದೆ. ರಸ್ತೆ, ರೈಲ್ವೆ, ಮೆಟ್ರೊ ರೈಲು, ಗಣಿ, ನೀರಾವರಿ, ವಿದ್ಯುತ್‌ ಮತ್ತು ನಗರಾಭಿವೃದ್ದಿ ಚಟುವಟಿಕೆಗಳು ಈ ಉದ್ಯಮದ ಬೆಳವಣಿಗೆಗೆ ನೆರವಾಗಲಿವೆ’ ಎಂದರು.

‘20ಕ್ಕೂ ಹೆಚ್ಚು ದೇಶಗಳ ಪ್ರದರ್ಶಕರು ಭಾಗವಹಿಸುತ್ತಿರುವುದು ಈ ಬಾರಿ ಮೇಳದ ವಿಶೇಷತೆಯಾಗಿದೆ. ಜರ್ಮನಿ, ಇಟಲಿ, ಚೀನಾ, ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.