ADVERTISEMENT

ಇಂಪಲ್ಸ್ ಶೀಘ್ರ ಮಾರುಕಟ್ಟೆಗೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2011, 19:30 IST
Last Updated 1 ನವೆಂಬರ್ 2011, 19:30 IST
ಇಂಪಲ್ಸ್ ಶೀಘ್ರ ಮಾರುಕಟ್ಟೆಗೆ
ಇಂಪಲ್ಸ್ ಶೀಘ್ರ ಮಾರುಕಟ್ಟೆಗೆ   

ನವದೆಹಲಿ (ಪಿಟಿಐ): ದ್ವಿಚಕ್ರ ವಾಹನ ತಯಾರಿಕೆ ಕಂಪೆನಿ ಹೀರೊ ಮೋಟೊ   ಕಾರ್ಪ್ ಹೊರತಂದಿರುವ `ಹೀರೊ~ ಬ್ರಾಂಡ್‌ನ ಮೊದಲ ಬೈಕ್ `ಇಂಪಲ್ಸ್~ ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ಈ ಬೈಕಿನ ದೆಹಲಿ ಎಕ್ಸ್‌ಷೂರೂಂ ಬೆಲೆ ರೂ.66,880. `ಇಂಪಲ್ಸ್~ 150 ಸಿಸಿ ಸಾಮರ್ಥ್ಯ ಎಂಜಿನ್ ಹೊಂದಿದ್ದು, ಸಾಮಾನ್ಯ ಮತ್ತು ಸಾಹಸ ಸವಾರಿಗೂ ಬಳಸಬಹುದಾಗಿದೆ  ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ. ಶೀಘ್ರದಲ್ಲೇ ಮೆಟ್ರೊ ನಗರಗಳಲ್ಲಿ `ಇಂಪಲ್ಸ್~ ಮತ್ತು 100 ಸಿಸಿ ಸ್ಕೂಟರ್ `ಮೆಸ್ಟ್ರೊ~ ಬಿಡುಗಡೆಯಾಗಲಿವೆ ಎಂದು ಹೀರೊ ಮೋಟೊಕಾರ್ಪ್‌ನ  ಮಾರುಕಟ್ಟೆ ಉಪಾಧ್ಯಕ್ಷ ಅನಿಲ್ ದುವಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.