ADVERTISEMENT

ಇದೇ 4ರಂದು ಅಡಿಕೆ ಅಧ್ಯಯನ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 19:30 IST
Last Updated 31 ಮಾರ್ಚ್ 2018, 19:30 IST
ಇದೇ 4ರಂದು ಅಡಿಕೆ ಅಧ್ಯಯನ ವರದಿ ಸಲ್ಲಿಕೆ
ಇದೇ 4ರಂದು ಅಡಿಕೆ ಅಧ್ಯಯನ ವರದಿ ಸಲ್ಲಿಕೆ   

ಮಂಗಳೂರು: ‘ಅಡಿಕೆಯಲ್ಲಿ ಆಯುರ್ವೇದ ಔಷಧಿಗೆ ಬೇಕಾದ ಅಂಶಗಳಿದ್ದು, ಶತಮಾನಗಳಿಂದ ಬಳಕೆಯಲ್ಲಿದೆ. ಆದ್ದರಿಂದ ಈ ಬೆಳೆಯಲ್ಲಿ ಯಾವುದೇ ಕ್ಯಾನ್ಸರ್‌ ಕಾರಕ ಅಂಶಗಳಿಲ್ಲ ಎಂಬುದನ್ನು ಕೇಂದ್ರ ಆರೋಗ್ಯ ಮತ್ತು ಕೃಷಿ ಸಚಿವರಿಗೆ ಮನವರಿಕೆ ಮಾಡಿಕೊಡಲಾಗುವುದು’ ಎಂದು ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಹೇಳಿದರು.

ಇಲ್ಲಿನ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಅಂತರರಾಷ್ಟ್ರೀಯ ಮಟ್ಟದ ಮತ್ತು ಕೇಂದ್ರ ಸರ್ಕಾರ ಅಧೀನದ ಸಿಪಿಸಿಆರ್‌ಐ ಸೇರಿದಂತೆ ಹಲವು ಸಂಸ್ಥೆಗಳ ಸಂಶೋಧಕರು ನಡೆಸಿದ ‘ಅಡಿಕೆ ಮತ್ತು ಮಾನವ ಆರೋಗ್ಯ’ ಎಂಬ ವರದಿಯನ್ನು ಪಡೆಯಲಾಗಿದೆ. ಈ ವರದಿಯನ್ನು ಇದೇ 4ರಂದು ಕೇಂದ್ರ ಆರೋಗ್ಯ ಮತ್ತು ಕೃಷಿ ಸಚಿವರಿಗೆ ಸಲ್ಲಿಸಲಾಗುವುದು.

‘ಮಾತ್ರವಲ್ಲ, ಕೆಲವು ಸಂಶೋಧನಾ ಸಂಸ್ಥೆಗಳಿಗೂ ಈ ವರದಿಯನ್ನು ತಲುಪಿಸಲಾಗುವುದು. ಈ ಮೂಲಕ ಅಡಿಕೆ ಬಗ್ಗೆ ಉಂಟಾಗಿರುವ ತಪ್ಪು ಅಭಿ
ಪ್ರಾಯವನ್ನು ಹೋಗಲಾಡಿಸಲಾಗುವುದು’ ಎಂದರು.

ADVERTISEMENT

‘ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ, ಇದರಲ್ಲಿ ಔಷಧೀಯ ಗುಣ ಇದೆ ಎಂಬುದನ್ನು ಸರ್ಕಾರ ಒಪ್ಪಿಕೊಳ್ಳುವ ನಿಟ್ಟಿನಲ್ಲಿ ಮನವರಿಕೆ ಮಾಡಿಕೊಡಲಾಗುವುದು. ಅಡಿಕೆ ಬೆಳೆಗಾರರಲ್ಲಿ ಅನವಶ್ಯಕವಾಗಿ ಆತಂಕ ಮೂಡಿಸುವ ನಿಟ್ಟಿನಲ್ಲಿ ಕೆಲವರು ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಅಡಿಕೆಯ ಸಾಂಪ್ರದಾಯಿಕ ಮಹತ್ವ ಗೊತ್ತಿಲ್ಲದ ಉತ್ತರ ಭಾರತದ ಕೆಲವರು ನೀಡಿದ ಹೇಳಿಕೆಯಿಂದಾಗಿ ತಪ್ಪು ಮಾಹಿತಿ ರವಾನೆಯಾಗಿದೆ' ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.