ADVERTISEMENT

ಈರುಳ್ಳಿ ಉತ್ಪಾದನೆ ಕುಸಿತ ಇಲ್ಲ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 19:30 IST
Last Updated 9 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ಪ್ರಸಕ್ತ ವರ್ಷ ಒಟ್ಟು 15.13 ದಶಲಕ್ಷ ಟನ್ ಈರುಳ್ಳಿ ಉತ್ಪಾದನೆಯ ಗುರಿ ಹೊಂದಲಾಗಿದ್ದು, ತಡವಾಗಿ ಲಭಿಸಿರುವ ಮುಂಗಾರು ಇಳುವರಿಯ  ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಗ್ರಾಹಕರಿಗೆ ಈ ವರ್ಷ  ಬೆಲೆ ಏರಿಕೆಯ ಬಿಸಿ ತಟ್ಟುವುದಿಲ್ಲ ಎಂದು ನಾಸಿಕ್ ಮೂಲದ ರಾಷ್ಟ್ರೀಯ ತೋಟಗಾರಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ (ಎನ್‌ಎಚ್‌ಆರ್‌ಡಿಎಫ್) ಭರವಸೆ ನೀಡಿದೆ.

ಚೀನಾದ ನಂತರ ಪ್ರಪಂಚದಲ್ಲಿಯೇ ಅತಿ ಹೆಚ್ಚು ಈರುಳ್ಳಿ ಉತ್ಪಾದಿಸುವ ಎರಡನೆಯ ದೇಶ ಭಾರತ. ಪ್ರಸಕ್ತ ವರ್ಷ ತಡವಾಗಿ ಲಭಿಸಿರುವ ಮುಂಗಾರಿನಿಂದ ಉತ್ಪಾದನೆ ಶೇ 15ರಿಂದ ಶೇ 20ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ, ಉತ್ಪಾದನೆ ಕುಸಿಯುವುದಿಲ್ಲ ಎಂದು `ಎನ್‌ಎಚ್‌ಆರ್‌ಡಿಎಫ್~ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.