ನವದೆಹಲಿ(ಪಿಟಿಐ): ಕಳೆದ ಹಣಕಾಸು ವರ್ಷದಲ್ಲಿ ಭಾರತ ಒಟ್ಟು 60 ಲಕ್ಷ ಟನ್ ಉಕ್ಕು ಆಮದು ಮಾಡಿಕೊಂಡಿದೆ. 2020ರ ವೇಳೆಗೆ ಉಕ್ಕು ಆಮದು ಪ್ರಮಾಣ 5 ಕೋಟಿ ಟನ್‌ನಷ್ಟಾಗಲಿದೆ.
2020ರ ವೇಳೆಗೆ ದೇಶದಲ್ಲಿನ ಉಕ್ಕು ಬೇಡಿಕೆ 20 ಕೋಟಿ ಟನ್‌ಗೆ ಹೆಚ್ಚಲಿದೆ. ಆದರೆ, ದೇಶೀಯ ಉತ್ಪಾದನೆ ಹೆಚ್ಚೆಂದರೆ 15 ಕೋಟಿ ಟನ್‌ನಷ್ಟಿರಲಿದ್ದು, ಆಮದು ಪ್ರಮಾಣ ಹೆಚ್ಚಳ ಅನಿವಾರ್ಯವಾಗಲಿದೆ ಎಂದು ಜಿಂದಾಲ್ ಉಕ್ಕು-ವಿದ್ಯುತ್ ಕಂಪನಿ ಉಪ ಮಹಾ ವ್ಯವಸ್ಥಾಪಕ ವಿ.ಆರ್.ಶರ್ಮಾ ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.
ಇದೇ ವೇಳೆ ಕಬ್ಬಿಣದ ಅದಿರು ರಫ್ತಿನಲ್ಲಿ ಭಾರಿ ಕುಸಿತವಾಗಿದ್ದು, ಇದಕ್ಕೆ ಕರ್ನಾಟಕ ಕಬ್ಬಿಣದ ಅದಿರು ರಫ್ತು ಮೇಲೆ ನಿರ್ಬಂಧ ವಿಧಿಸಿದ್ದೇ ಕಾರಣ ಎಂದು ಭಾರತೀಯ ಅದಿರುವ ಕೈಗಾರಿಕೆಗಳ ಒಕ್ಕೂಟ (ಎಫ್‌ಐಎಂಐ) ಶುಕ್ರವಾರ ಹೇಳಿದೆ. ವಿಶ್ವದಲ್ಲಿ ಕಬ್ಬಿಣ ಅದಿರು ರಫ್ತಿನಲ್ಲಿ ಮೂರನೇ ಅತಿದೊಡ್ಡ ರಾಷ್ಟ್ರ ಭಾರತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.