ADVERTISEMENT

ಉತ್ತರಾಖಂಡ: ಕಬ್ಬಿಗೆ ರೂ 2850 ಬೆಲೆ ನಿಗದಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 19:30 IST
Last Updated 4 ಡಿಸೆಂಬರ್ 2013, 19:30 IST

ಡೆಹರಾಡೂನ್‌(ಪಿಟಿಐ): ಉತ್ತರಾ ಖಂಡ ರಾಜ್ಯ ಸರ್ಕಾರ ಕಬ್ಬಿನ ಬೆಲೆ ಯನ್ನು ಟನ್‌ಗೆ ರೂ 2850ಕ್ಕೆ ನಿಗದಿಪಡಿಸಿ ಬುಧವಾರ ಆದೇಶ ಹೊರಡಿಸಿದೆ. ಕಬ್ಬು ಅರೆಯು­ವುದನ್ನು ಗುರುವಾರ­ದಿಂದಲೇ ಪುನರಾರಂಭಿಸುವಂತೆ­ಯೂ ಸಕ್ಕರೆ ಕಾರ್ಖಾನೆಗಳಿಗೂ ಸೂಚಿಸಿದೆ.

ಕಬ್ಬು ನಿಯಂತ್ರಣ ಮಂಡಳಿ
ಮುಂಬೈ ವರದಿ: ಈ ಮಧ್ಯೆ ಮಹಾ ರಾಷ್ಟ್ರ ಸರ್ಕಾರ ‘ಕಬ್ಬು ನಿಯಂತ್ರಣ ಮಂಡಳಿ’ ರಚಿಸಲು ನಿರ್ಧರಿಸಿದೆ.
ರಾಜ್ಯದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಕಬ್ಬು ನಿಯಂತ್ರಣ ಮಂಡಳಿ ರಚಿಸಲು ರಾಜ್ಯ ಸಚಿವ ಸಂಪುಟ ಬುಧ ವಾರ ಒಪ್ಪಿಗೆ ನೀಡಿದೆ.

ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರ ಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳು ಮಂಡಳಿ ಯಲ್ಲಿರುತ್ತಾರೆ.
ಸದ್ಯ ಮಹಾರಾಷ್ಟ್ರದಲ್ಲಿ ನೋಂದಾ ಯಿತ 202 ಸಹಕಾರಿ ಸಕ್ಕರೆ ಕಾರ್ಖಾನೆ ಗಳಿವೆ. ಖಾಸಗಿ ಕ್ಷೇತ್ರದಲ್ಲಿ 65 ಕಾರ್ಖಾ ನೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.