ADVERTISEMENT

ಉತ್ಪಾದಕರ ಸಂಸ್ಥೆಗಳಿಗೆ ರೂ 8 ಕೋಟಿ ಮೀಸಲು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 19:59 IST
Last Updated 14 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ರಾಜ್ಯದಲ್ಲಿ ನಬಾರ್ಡ್ ಗುರುತಿಸಿರುವ ಐದು ಸಂಸ್ಥೆಗಳಿಗೆ ‘ಉತ್ಪಾದಕರ ಸಂಸ್ಥೆಗಳ ಅಭಿವೃದ್ಧಿ ನಿಧಿ’ ಅಡಿಯಲ್ಲಿ ಪ್ರಸಕ್ತ ಸಾಲಿಗೆ ರೂ 8 ಕೋಟಿ ಮೀಸಲಿಟ್ಟಿದೆ.

ಚಿತ್ರದುರ್ಗ ಎಣ್ಣೆಬೀಜ ಉತ್ಪಾದಕರ ಸಂಸ್ಥೆ, ತೋಟಗಾರ ಸಹಕಾರ ಮಾರಾಟ ಸೊಸೈಟಿ, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಯೂನಿಯನ್‌, ಸಹಜ ಸಮೃದ್ಧಿ ಸಾವಯವ ಉತ್ಪಾದಕರ ಸಂಸ್ಥೆ ಮತ್ತು ಕದಂಬ ಮಾರ್ಕೆಟಿಂಗ್‌ ಸೊಸೈಟಿಗಳನ್ನು ನಬಾರ್ಡ್‌ ಗುರುತಿಸಿದೆ. 2011ರಲ್ಲಿ ರೂ 50 ಕೋಟಿ ನಿಧಿಯೊಂದಿಗೆ ಈ ಯೋಜನೆಯನ್ನು ಆರಂಭಿಸಲಾಗಿತ್ತು.

ರಾಜ್ಯದಲ್ಲಿನ ಈ ಸಂಘಟನೆಗಳಿಗೆ ರೂ 39.045 ಕೋಟಿ ನೀಡುವ ಮೂಲಕ ಡೈರಿ, ಮೀನುಗಾರಿಕೆ ಮುಂತಾದ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು ಉತ್ತೇಜನ ನೀಡಿತ್ತು ಎಂದು ನಬಾರ್ಡ್‌ ಮುಖ್ಯ ಮಹಾಪ್ರಬಂಧಕ ಜಿ.ಆರ್‌. ಚಿಂತಾಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.