ADVERTISEMENT

ಉಳಿತಾಯ ಖಾತೆಗೆ 3 ತಿಂಗಳೊಳಗೆ ಬಡ್ಡಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 19:30 IST
Last Updated 4 ಡಿಸೆಂಬರ್ 2013, 19:30 IST

ಮುಂಬೈ (ಪಿಟಿಐ): ಉಳಿತಾಯ ಖಾತೆ ದಾರರಿಗೆ ಸಿಹಿ ಸುದ್ದಿ. ಇನ್ನು ಮುಂದೆ ಬ್ಯಾಂಕುಗಳು ನಿಶ್ಚಿತ ಠೇವಣಿಗೆ ನೀಡು­ವಂತೆಯೇ ಉಳಿತಾಯ ಖಾತೆಯಲ್ಲಿನ ಮೊತ್ತಕ್ಕೂ ಮೂರು ತಿಂಗಳಿಗಿಂತ ಮುಂಚೆಯೇ ಬಡ್ಡಿ ಜಮಾ ಮಾಡಲಿವೆ.

ಈವರೆಗೂ ಬ್ಯಾಂಕುಗಳು ಉಳಿ­ತಾಯ ಖಾತೆಯಲ್ಲಿನ ಮೊತ್ತಕ್ಕೆ ನೀಡುವ ಬಡ್ಡಿಯನ್ನು ಆರು ತಿಂಗಳಿ­ಗೊಮ್ಮೆ ಖಾತೆಗೆ ಜಮಾ ಮಾಡುತ್ತಿದ್ದವು. ಆದರೆ, ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸೂಚನೆ ಅನ್ವಯ ಇನ್ನು ಮುಂದೆ ಮೂರು ತಿಂಗಳಿಗಿಂತ ಮುಂಚಿತ­ವಾಗಿ­ಯೇ ಬಡ್ಡಿ ನೀಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.