ADVERTISEMENT

ಎಂಎಫ್ ನಿರ್ಗಮನ ಶುಲ್ಕ, ಗಡುವು ಹೆಚ್ಚಳಕ್ಕೆ ಕ್ರಮ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 19:30 IST
Last Updated 15 ಅಕ್ಟೋಬರ್ 2012, 19:30 IST

ನವದೆಹಲಿ(ಪಿಟಿಐ): ಹೂಡಿಕೆ ಮಾಡಿದ ಬೆನ್ನಲ್ಲೇ ಮ್ಯೂಚುವಲ್ ಫಂಡ್ ಯುನಿಟ್‌ಗಳನ್ನು ಮಾರಾಟ ಮಾಡುವ ಹೂಡಿಕೆದಾರರ ರೂಢಿಗೆ ತಡೆಯೊಡ್ಡುವಂತಹ ಕ್ರಮಕ್ಕೆ `ಮ್ಯೂಚುವಲ್ ಫಂಡ್~ ವಲಯ ಮುಂದಾಗಿದೆ.

ಯೋಜನೆಯಿಂದ ನಿರ್ಗಮನ ವೇಳೆ ಶುಲ್ಕವನ್ನು(ಎಕ್ಸಿಟ್ ಲೋಡ್) ಭಾರಿ ಪ್ರಮಾಣದಲ್ಲಿ ಏರಿಸಲು, ನಿರ್ಗಮನದ  ಗಡುವು ವಿಸ್ತರಿಸಲು `ಫಂಡ್~ ನಿರ್ವಹಣಾ ಸಂಸ್ಥೆಗಳು ಚಿಂತನೆ ನಡೆಸಿವೆ.

ಇದು ಷೇರುಪೇಟೆಯಲ್ಲಿ ಸಂಚಲನಉಂಟು ಮಾಡಿದ್ದು, ದೊಡ್ಡ ಸಂಖ್ಯೆಯ ಚಿಲ್ಲರೆ ಹೂಡಿಕೆದಾರರು ತಮ್ಮ ಹಣ ವಾಪಸ್ ತೆಗೆದುಕೊಳ್ಳಲಾರಂಭಿಸಿದ್ದಾರೆ. ಇದರಿಂದ ಸೆಪ್ಟೆಂಬರ್‌ನಲ್ಲಿ ರೂ. 3559 ಕೋಟಿ ಹೂಡಿಕೆ ಹಿಂತೆಗೆದುಕೊಂಡಂತಾ ಗಿದೆ. ಇದು ಕಳೆದ ಎರಡು ವರ್ಷದಲ್ಲಿಯೇ ಗರಿಷ್ಠ ಮೊತ್ತವಾಗಿದೆ.

ಇದರಿಂದ ಕೊಂಚ ವಿಚಲಿತವಾಗಿರುವ ಐಸಿಐಸಿಐ ಪ್ರುಡೆನ್ಷಿಯಲ್ ಎಂಎಫ್, ಜೆಪಿ ಮೋರ್ಗನ್ ಎಂಎಫ್, ಆಕ್ಸಿಸ್ ಎಂಎಫ್ ಮೊದಲಾದ ಪ್ರಮುಖ ಮ್ಯೂಚುವಲ್ ಫಂಡ್ ಸಂಸ್ಥೆಗಳು ಹೂಡಿಕೆ ನಿರ್ಗಮನ ಗಡುವು ಮತ್ತು ಶುಲ್ಕ ಹೆಚ್ಚಿಸುವ ಪ್ರಕ್ರಿಯೆ ಆರಂಭಿಸಿವೆ. ಹೀಗಾದರೂ ಹೂಡಿಕೆದಾರರನ್ನು ಹೆಚ್ಚಿನ ಅವಧಿಗೆ ಉಳಿಸಿಕೊಳ್ಳಬೇಕು ಎಂಬುದೇ ಸಂಸ್ಥೆಗಳ ಉದ್ದೇಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.