ಬೆಂಗಳೂರು: ಹಿಂದೂಸ್ತಾನ್ ಯುನಿಲಿವರ್ ಲಿ.(ಎಚ್‌ಯುಎಲ್)ನಲ್ಲಿನ ತನ್ನ ಷೇರು ಪಾಲನ್ನು ಶೇ 52.22ರಿಂದ ಶೇ 75ಕ್ಕೆ ಹೆಚ್ಚಿಸಿಕೊಳ್ಳಲು ಮುಂದಾಗಿರುವ `ಯುನಿಲಿವರ್ ಪಿಎಲ್‌ಸಿ' ್ಙ29,200 ಮೌಲ್ಯದ ಷೇರು ಖರೀದಿಗೆ ಸಜ್ಜಾಗಿದೆ.
ರೂ.600ರಂತೆ ಷೇರು ಖರೀದಿಸಲಿದ್ದು, ಹೂಡಿಕೆದಾರರು ಮಾರಾಟ ಮಾಡಬಹುದು. ಖರೀದಿಯ ಈ ಆಹ್ವಾನ ಜೂ. 21ರಿಂದ ಜು.4ರವರೆಗೆ ಇರಲಿದೆ ಎಂದು `ಯುನಿಲಿವರ್ ಪಿಎಲ್‌ಸಿ' ಹೇಳಿದೆ.
ಎಚ್‌ಯುಎಲ್ ಷೇರು ಮಾರಾಟ ಮಾಡಿ ಯುನಿಲಿವರ್ ಪಿಎಲ್‌ಸಿಗೆ ಬದ ಲಾಯಿಸಿಕೊಳ್ಳುವುದು ಉತ್ತಮ ಆಯ್ಕೆ ಎನಿಸಿಕೊಳ್ಳಲಿದೆ ಎಂದು ಸ್ಯಾಕ್ಸೊ ಇಂಡಿಯ ಫೈನಾನ್ಸಿಯಲ್ ಸರ್ವಿಸಸ್ ವ್ಯವಸ್ಥಾಪಕ ನಿರ್ದೇಶಕ ರುದ್ರ ದಾಲ್ಮಿಯ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.