ADVERTISEMENT

ಎನ್‍ಯು ಹಾಸ್ಪಿಟಲ್ಸ್‌ನಲ್ಲಿ ‘ಪೇಷಂಟ್ ಸೇಫ್ಟಿನೆಟ್’

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 19:30 IST
Last Updated 1 ಮಾರ್ಚ್ 2018, 19:30 IST
ಒಪ್ಪಂದ ಮಾಡಿಕೊಂಡ ಸಂದರ್ಭದಲ್ಲಿ ಮಾಸಿಮೊ ಅಧಿಕಾರಿಗಳಾದ ಭರತ್‍ ಮಾಂಟೆರೊ, ಜಾನ್‍ ಕೋಲ್ಮನ್‍, ಎನ್‍ಯು ಹಾಸ್ಪಿಟಲ್ಸ್‌ನ ಡಾ. ವೆಂಕಟೇಶ್‍ ಕೃಷ್ಣಮೂರ್ತಿ, ಡಾ. ಅಕ್ಷಯ್‍ ಧರ್ ಹಾಜರಿದ್ದರು.
ಒಪ್ಪಂದ ಮಾಡಿಕೊಂಡ ಸಂದರ್ಭದಲ್ಲಿ ಮಾಸಿಮೊ ಅಧಿಕಾರಿಗಳಾದ ಭರತ್‍ ಮಾಂಟೆರೊ, ಜಾನ್‍ ಕೋಲ್ಮನ್‍, ಎನ್‍ಯು ಹಾಸ್ಪಿಟಲ್ಸ್‌ನ ಡಾ. ವೆಂಕಟೇಶ್‍ ಕೃಷ್ಣಮೂರ್ತಿ, ಡಾ. ಅಕ್ಷಯ್‍ ಧರ್ ಹಾಜರಿದ್ದರು.   

ಬೆಂಗಳೂರು: ರೋಗಿಗಳ ನಿರಂತರ ಆರೈಕೆಗಾಗಿ ‘ಪೇಷಂಟ್ ಸೇಫ್ಟಿನೆಟ್’ ಮಾಸಿಮೊ ತಂತ್ರಜ್ಞಾನಗಳನ್ನು ನಗರದ ಎನ್‍ಯು ಹಾಸ್ಪಿಟಲ್ಸ್ ಅಳವಡಿಸಿಕೊಂಡಿದೆ.

ಶಸ್ತ್ರಚಿಕಿತ್ಸಾ ಕೊಠಡಿ, ಐಸಿಯು ಯೂನಿಟ್‍, ಡಯಲಿಸಿಸ್ ಮತ್ತು ಸಾಮಾನ್ಯ ವಾರ್ಡ್‍ಗಳಲ್ಲಿ ಅತ್ಯಾಧುನಿಕ ನಿಗಾ ತಂತ್ರಜ್ಞಾನಗಳ ಅಳವಡಿಸಿಕೆಗಾಗಿ ಆಸ್ಪತ್ರೆಯು, ಅಮೆರಿಕದ ಮಾಸಿಮೊ ಸಂಸ್ಥೆ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

‘ರೋಗಿಗಳ ಸುರಕ್ಷತೆಯ ಜೊತೆಗೆ ಆರೈಕೆಯ ವೆಚ್ಚ ಕಡಿಮೆ ಮಾಡುವ ವಿವಿಧ  ತಂತ್ರಜ್ಞಾನಗಳನ್ನು ನಮ್ಮ ಆಸ್ಪತ್ರೆ ಅಳವಡಿಸಿಕೊಂಡಿದೆ’ ಎಂದು ಎನ್‍ಯು ಹಾಸ್ಪಿಟಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಸನ್ನ ವೆಂಕಟೇಶ್ ಹೇಳಿದ್ದಾರೆ.

ADVERTISEMENT

ಸಾಮಾನ್ಯವಾಗಿ ಆಸ್ಪತ್ರೆಗಳ ಶಸ್ತ್ರಚಿಕಿತ್ಸಾ ಕೊಠಡಿ, ಐಸಿಯುನಂತಹ ಸ್ಥಳಗಳಲ್ಲಿ ಮಾತ್ರ ತೀವ್ರ ನಿಗಾ ಮಾನಿಟರ್‌ಗಳು ಇರುತ್ತವೆ. ಸಾಮಾನ್ಯ ವಾರ್ಡ್‍ಗಳಲ್ಲಿರುವ ರೋಗಿಗಳನ್ನು ನಿರಂತರವಾಗಿ ಪರಿಶೀಲಿಸುವ ತಂತ್ರಜ್ಞಾನವನ್ನು ಮಾಸಿಮೊ ರೂಪಿಸಿದೆ. ಇದರಿಂದ ರೋಗಿಗಳ ಮೇಲೆ ನಿರಂತರವಾಗಿ ನಿಗಾ ವಹಿಸಬಹುದು.

ರೋಗಿಗಳ ದೇಹ ಸ್ಥಿತಿಯಲ್ಲಿ ಏರುಪೇರಾದರೂ ಈ ಸಾಧನಗಳು ಎಚ್ಚರಿಕೆಯ ಸಂದೇಶ ರವಾನಿಸುತ್ತವೆ ಎಂದು ಮಾಸಿಮೊ ಮೆಡಿಕಲ್ ಅಫೇರ್ಸ್‍ನ ವಿಶ್ವ ಮಾರಾಟ ವಿಭಾಗದ ಅಧ್ಯಕ್ಷ ಜಾನ್ ಕೋಲ್‍ಮನ್ ಅವರು ಹೇಳಿದರು.

ಮಾಸಿಮೊ ಇಂಡಿಯಾದ ಕಂಟ್ರಿ ಮ್ಯಾನೇಜರ್ ಭರತ್ ಮಾಂಟೆರೊ, ಎನ್‍ಯು ಹಾಸ್ಪಿಟಲ್ಸ್‍ನ ಸಿಇಒ ಡಾ. ಅಕ್ಷಯ್ ಧರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.