ADVERTISEMENT

ಎಫ್‌ಕೆಸಿಸಿಐ: ಬಜೆಟ್ ಪೂರ್ವ ಮನವಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 19:30 IST
Last Updated 22 ಫೆಬ್ರುವರಿ 2012, 19:30 IST

ಬೆಂಗಳೂರು: ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘ (ಎಫ್‌ಕೆಸಿಸಿಐ) 2012-13ನೇ ಸಾಲಿನ ಬಜೆಟ್ ಪೂರ್ವ ಮನವಿ ಸಲ್ಲಿಸಿದ್ದು,  ತೆರಿಗೆ ಕಡಿತ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದೆ.

ಕೈಗಾರಿಕೆ ವಲಯಕ್ಕೆ ಬಂಡವಾಳ ಆಕರ್ಷಿಸಲು ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು.  ಪ್ರಾದೇಶಿಕ ಅಸಮತೋಲನ ನಿವಾರಿಸಲು ಕೃಷಿ ಮತ್ತು ಕೈಗಾರಿಕೆ ಕ್ಷೇತ್ರಗಳ ಬೆಳವಣಿಗೆ ಉತ್ತೇಜನ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಿದೆ.
 
ನೀರಾವರಿ ಪಂಪ್‌ಸೆಟ್‌ಗಳ ಮೇಲಿನ ಸಬ್ಸಿಡಿ ಹೆಚ್ಚಳ, ಜೈವಿಕ ಇಂಧನ ಘಟಕಗಳನ್ನು ಪ್ರತಿ ಜಿಲ್ಲೆಗಳಲ್ಲಿ ಸ್ಥಾಪಿಸುವುದು, ಪೆಟ್ರೋಲ್ ದರ ತಗ್ಗಿಸಲು ಪ್ರವೇಶ ತೆರಿಗೆಯನ್ನು ರದ್ದುಗೊಳಿಸುವುದು. ಮೋಟಾರು ವಾಹನ ತೆರಿಗೆಯನ್ನು ಕಡಿತಗೊಳಿಸುವುದು, ಆಸ್ತಿಗಳಿಗೆ ವಿಧಿಸಲಾಗುತ್ತಿರುವ ಮುಂದ್ರಾಂಕದ ದರ ಕಡಿತಗೊಳಿಸುವುದು, `ಎಪಿಎಂಸಿ~ ಸೆಸ್ ಅನ್ನು ಈಗಿರುವ ಶೇ1.5ರಿಂದ  ಶೇ 0.5ಕ್ಕೆ ಇಳಿಸುವುದು ಇತರೆ ಬೇಡಿಕೆಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.