ADVERTISEMENT

ಎಫ್‌ಡಿಐ ಉತ್ತೇಜನಕ್ಕೆ ಕ್ರಮ

​ಪ್ರಜಾವಾಣಿ ವಾರ್ತೆ
Published 20 ಜೂನ್ 2012, 19:30 IST
Last Updated 20 ಜೂನ್ 2012, 19:30 IST
ಎಫ್‌ಡಿಐ ಉತ್ತೇಜನಕ್ಕೆ  ಕ್ರಮ
ಎಫ್‌ಡಿಐ ಉತ್ತೇಜನಕ್ಕೆ ಕ್ರಮ   

ನವದೆಹಲಿ (ಪಿಟಿಐ): `ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಉತ್ತೇಜಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಆದರೆ, ಈ ಪ್ರಯತ್ನಗಳ ಪರಿಣಾಮಗಳು ಗೋಚರಿಸಲು ಇನ್ನಷ್ಟು ಸಮಯ ಬೇಕಾಗುತ್ತದೆ~ ಎಂದು  ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.

ಕೆಲವು ನಿರ್ಧಿಷ್ಟ ವಲಯಗಳಲ್ಲಿ ಯೋಗ್ಯವಾದ ಕ್ರಮ ಕೈಗೊಳ್ಳುವ ಅಗತ್ಯ ಇದೆ. ಈಗಾಗಲೇ ಈ ಪ್ರಯತ್ನಗಳು ನಡೆದಿದ್ದು, ಫಲಗಳನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಅವರು ಹೇಳಿದರು. ಕ್ರೆಡಿಟ್ ರೇಟಿಂಗ್ ಸಂಸ್ಥೆ `ಫಿಚ್~ ದೇಶದ ಸಾಲ ಮುನ್ನೋಟ ತಗ್ಗಿಸಿರುವುದರ ಕುರಿತು ವರದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

`ಫಿಚ್~ ವರದಿಯನ್ನು ಅಲ್ಲಗಳೆದಿರುವ ಪ್ರಣವ್, `ಎಫ್‌ಡಿಐ~ ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆ (ಎಫ್‌ಐಐ) ಹೆಚ್ಚುವಂತೆ ಮಾಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಬಾಹ್ಯ ವಾಣಿಜ್ಯ ಸಾಲದ ಮೇಲೆ (ಇಸಿಬಿ) ಮೇಲೆ ರಿಯಾಯ್ತಿ ನೀಡಲಾಗಿದೆ. ಹೂಡಿಕೆ ಆಕರ್ಷಿಸಲು ಮೂಲಸೌಕರ್ಯ ಸಾಲ ನಿಧಿ (ಐಡಿಎಫ್) ಸ್ಥಾಪಿಸಲಾಗಿದೆ ಎಂದರು.

ದೇಶದ ಅರ್ಥವ್ಯವಸ್ಥೆಯಲ್ಲಿ ಇತ್ತೀಚೆಗೆ ಆಗಿರುವ ಧನಾತ್ಮಕ ಬೆಳವಣಿಗೆಗಳನ್ನು ಗಮನಿಸದೆ, `ಫಿಚ್~ ಈ ವರದಿ ನೀಡಿದೆ. ಸರ್ಕಾರ ರಸಗೊಬ್ಬರ ಸಬ್ಸಿಡಿ ವ್ಯವಸ್ಥೆಯಲ್ಲಿ ತಂದಿರುವ ಸುಧಾರಣೆ,  ಹೊಸ ತಯಾರಿಕೆ ಮತ್ತು ದೂರವಾಣಿ ನೀತಿ ಇತ್ಯಾದಿ ಸಂಗತಿಗಳನ್ನು ರೇಟಿಂಗ್ ಸಂಸ್ಥೆ ಗಮನಿಸಿಲ್ಲ ಎಂದು ಪ್ರಣವ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.