ADVERTISEMENT

ಎರಡು ವಾರಗಳ ಕನಿಷ್ಠ ಮಟ್ಟಕ್ಕೆ ಷೇರುಪೇಟೆ

ಪಿಟಿಐ
Published 5 ಮಾರ್ಚ್ 2018, 19:30 IST
Last Updated 5 ಮಾರ್ಚ್ 2018, 19:30 IST

ಮುಂಬೈ: ಉಕ್ಕು ಮತ್ತು ಅಲ್ಯುಮಿನಿಯಂ ಮೇಲೆ ಅಮೆರಿಕವು ವಿಧಿಸಲು ಹೊರಟಿರುವ ಆಮದು ಸುಂಕದ ಕಾರಣಕ್ಕೆ ನಡೆಯಬಹುದಾದ ‘ಜಾಗತಿಕ ವಾಣಿಜ್ಯ ಸಮರ’ವು ಮುಂಬೈ ಷೇರುಪೇಟೆ ವಹಿವಾಟಿನ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ.

ಸಂವೇದಿ ಸೂಚ್ಯಂಕವು ಸೋಮವಾರದ ವಹಿವಾಟಿನಲ್ಲಿ 300 ಅಂಶ ಕಳೆದುಕೊಂಡು ಎರಡು ವಾರಗಳ ಕನಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಕಳೆದ ವಾರ  ಉಕ್ಕು ಆಮದು ನಿರ್ಬಂಧಗೊಳಿಸಲು ತೆಗೆದುಕೊಂಡ ತೀರ್ಮಾನವು, ಲೋಹ, ಬ್ಯಾಂಕಿಂಗ್, ತೈಲ ಮತ್ತು ಅನಿಲ ಹಾಗೂ ವಾಹನ ಉದ್ಯಮದ ಷೇರುಗಳ ಮೇಲೆ ತೀವ್ರ ಪರಿಣಾಮ ಬೀರಿದೆ.

ADVERTISEMENT

ದಿನದ ಅಂತ್ಯದ ವೇಳೆಗೆ 300 ಅಂಶ ಕಳೆದುಕೊಂಡು 33,746 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು.

ರಾಷ್ಟ್ರೀಯ ಷೇರುಪೇಟೆ (ನಿಫ್ಟಿ) ಕೂಡ 99.50 ಅಂಶಗಳನ್ನು ಕಳೆದುಕೊಂಡು 10,358 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.