ADVERTISEMENT

ಎಲ್ ಅಂಡ್ ಟಿ: ಲಾಭ ರೂ.863 ಕೋಟಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2012, 19:30 IST
Last Updated 23 ಜುಲೈ 2012, 19:30 IST

ನವದೆಹಲಿ(ಪಿಟಿಐ): ಜೂನ್ 30ಕ್ಕೆ ಕೊನೆಗೊಂಡ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ನಿರ್ಮಾಣ ಕಾಮಗಾರಿ ಕಂಪೆನಿ ಎಲ್ ಅಂಡ್ ಟಿ (ಲಾಸರ್ನ್ ಅಂಡ್ ಟ್ಯೂಬ್ರೊ) ರೂ.863 ಕೋಟಿ ನಿವ್ವಳ ಲಾಭ ಗಳಿಸಿದೆ.

2011ರ ಇದೇ ಅವಧಿಗೆ ಹೋಲಿಸಿದರೆ ನಿವ್ವಳ ಲಾಭ ಶೇ 15.7ರಷ್ಟು ಏರಿಕೆ ಕಂಡಿದೆ. ವರಮಾನವೂ ಶೇ 26ರಷ್ಟು ಹೆಚ್ಚಳವಾಗಿದ್ದು, ರೂ.11,956 ಕೋಟಿಗಳಷ್ಟಾಗಿದೆ.

ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಎಂಜಿನಿಯರಿಂಗ್ ಮತ್ತು ಕಾಮಗಾರಿ ವಿಭಾಗದಿಂದ ರೂ.10,441 ಕೋಟಿ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಿಂದ ರೂ.723 ಕೋಟಿ ವರಮಾನ ಬಂದಿದೆ ಎಂದು ಕಂಪೆನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.