ADVERTISEMENT

ಎಸ್‌ಬಿಐ ಬಡ್ಡಿದರ ಹೆಚ್ಚಳ

ಪಿಟಿಐ
Published 28 ಫೆಬ್ರುವರಿ 2018, 20:40 IST
Last Updated 28 ಫೆಬ್ರುವರಿ 2018, 20:40 IST
ಎಸ್‌ಬಿಐ ಬಡ್ಡಿದರ ಹೆಚ್ಚಳ
ಎಸ್‌ಬಿಐ ಬಡ್ಡಿದರ ಹೆಚ್ಚಳ   

ಮುಂಬೈ: ಭಾರತೀಯ ಸ್ಟೇಟ್‌ ಬ್ಯಾಂಕ್‌ ವಿವಿಧ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ 0.75ರವರೆಗೆ ಹೆಚ್ಚಿಸಿದೆ.

ಹೊಸ ಬಡ್ಡಿ ದರಗಳು ₹ 1 ಕೋಟಿಗಿಂತ ಕಡಿಮೆ ಮೊತ್ತದ ಮತ್ತು ₹ 1 ಕೋಟಿಗಿಂತ ಹೆಚ್ಚಿನ ಮೊತ್ತದ ವಿವಿಧ ಕಾಲಾವಧಿಯ ಠೇವಣಿಗಳಿಗೆ ಅನ್ವಯವಾಗಲಿವೆ. ₹ 1 ಕೋಟಿಗಿಂತ ಕಡಿಮೆ ಮೊತ್ತದ ಠೇವಣಿಗಳ ಮೇಲೆ ಶೇ 0.50ರವರೆಗೆ ಬಡ್ಡಿದರ ಹೆಚ್ಚಿಸಲಾಗಿದೆ. ಹೊಸದರ ಬುಧವಾರದಿಂದಲೇ ಅನ್ವಯವಾಗಲಿವೆ.

ಒಂದು ವರ್ಷದಿಂದ ಎರಡು ವರ್ಷಗಳ ಒಳಗಿನ ಅವಧಿಯ ಠೇವಣಿಗಳ ಮೇಲಿನ ಈ ಹಿಂದಿನ ಶೇ 6.25ರಷ್ಟು ಬಡ್ಡಿ ದರವನ್ನು ಶೇ 6.40ಕ್ಕೆ (ಶೇ 0.15) ಹೆಚ್ಚಿಸಲಾಗಿದೆ.

ADVERTISEMENT

ಎರಡರಿಂದ ಹತ್ತು ವರ್ಷಗಳವರೆಗಿನ ಚಿಲ್ಲರೆ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ 0.50ರಷ್ಟು ಹೆಚ್ಚಿಸಿದೆ. ಶೇ 6ರಷ್ಟಿದ್ದ ಬಡ್ಡಿ ದರವನ್ನು ಈಗ ಶೇ 6.50ಕ್ಕೆ ಹೆಚ್ಚಿಸಲಾಗಿದೆ.

₹1 ಕೋಟಿಯಿಂದ 10 ಕೋಟಿವರೆಗಿನ 1 ವರ್ಷದಿಂದ ಎರಡು ವರ್ಷಗಳ ಅವಧಿಯ ಠೇವಣಿಗಳ ಮೇಲೂ ಶೇ 0.50ರಷ್ಟು ಬಡ್ಡಿದರ ಹೆಚ್ಚಿಸಲಾಗಿದೆ. ಹೊಸ ಬಡ್ಡಿ ದರ ಶೇ 6.75ರಷ್ಟು ಇರಲಿದೆ. ಎರಡು ವರ್ಷಗಳಿಂದ ಮೂರು ವರ್ಷಗಳವರೆಗಿನ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ 6.75ಕ್ಕೆ (ಶೇ 0.75ರಷ್ಟು) ಏರಿಸಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.