ADVERTISEMENT

ಎಸ್‌ಬಿಎಂಗೆ ನಬಾರ್ಡ್ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2012, 19:30 IST
Last Updated 4 ಮಾರ್ಚ್ 2012, 19:30 IST
ಎಸ್‌ಬಿಎಂಗೆ ನಬಾರ್ಡ್ ಪ್ರಶಸ್ತಿ
ಎಸ್‌ಬಿಎಂಗೆ ನಬಾರ್ಡ್ ಪ್ರಶಸ್ತಿ   

ಬೆಂಗಳೂರು: ಸ್ವ ಸೇವಾ ಗುಂಪುಗಳು ಮತ್ತು ಬ್ಯಾಂಕ್‌ಗಳ ಮಧ್ಯೆ ಸಂಪರ್ಕ ಸೇತುವೆ ಕಾರ್ಯಕ್ರಮ ಜಾರಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್‌ಬಿಎಂ), ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ (ನಬಾರ್ಡ್) 2010-11ನೇ ಸಾಲಿನ ಅತ್ಯುತ್ತಮ ಸಾಧನೆ ಪ್ರಶಸ್ತಿಗೆ ಭಾಜನವಾಗಿದೆ.

ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ, ಬ್ಯಾಂಕ್‌ನ ಚೀಫ್ ಜನರಲ್ ಮ್ಯಾನೇಜರ್ ಹಂಸಿನಿ ಮೆನನ್ ಮತ್ತು ಜನರಲ್ ಮ್ಯಾನೇಜರ್ ವಿ. ಪಟ್ಟಾಭಿರಾಮನ್ ಅವರು, ಕೃಷಿ ಸಚಿವ ಉಮೇಶ್ ಕತ್ತಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಸ್ವಸಹಾಯ ಗುಂಪುಗಳ ವಹಿವಾಟಿನಲ್ಲಿ `ಎಸ್‌ಬಿಎಂ~ನ ಕಗ್ಗಲಿಪುರ ಶಾಖೆ ಅತ್ಯುತ್ತಮ ಸಾಧನೆಯ ಪ್ರಶಸ್ತಿ ಪಡೆದುಕೊಂಡಿದೆ. `ಎಸ್‌ಬಿಎಂ~ ಪ್ರಾಯೋಜಕತ್ವದ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್, ರಾಜ್ಯದಲ್ಲಿನ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿಯೇ ಅತ್ಯುತ್ತಮ ಸಾಧನೆ ಮಾಡಿದ ಪ್ರಶಸ್ತಿಗೂ ಪಾತ್ರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.