ADVERTISEMENT

ಏಕ ಬ್ರಾಂಡ್ ಎಫ್‌ಡಿಐ: 3 ಪ್ರಸ್ತಾವ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 19:30 IST
Last Updated 19 ಅಕ್ಟೋಬರ್ 2012, 19:30 IST

ನವದೆಹಲಿ(ಪಿಟಿಐ): ದೇಶದ ಏಕ ಬ್ರಾಂಡ್ ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ರೂ.106 ಕೋಟಿ ಮೊತ್ತದ ಮೂರು ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಪ್ರಸ್ತಾವಗಳಿಗೆ ಕೇಂದ್ರ ಸರ್ಕಾರ ಶುಕ್ರವಾರ ಒಪ್ಪಿಗೆ ನೀಡಿದೆ.

ಅಮೆರಿಕ ಮೂಲದ ಜವಳಿ ಉದ್ಯಮ  ಸಂಸ್ಥೆ ಬ್ರೂಕ್ಸ್ ಬ್ರದರ್ಸ್,  ಇಂಗ್ಲೆಂಡ್‌ನ ಪಾದರಕ್ಷೆ ತಯಾರಿಕೆ ಕಂಪೆನಿ ಚೈನ್ ಪವರ್ಸ್, ಇಟಲಿ ಮೂಲದ ಚಿನ್ನಾಭರಣ ಕಂಪೆನಿ ಡಮೀಯ್ನಿ ಪ್ರಸ್ತಾವ ಗಳನ್ನು ವಿದೇಶಿ ನೇರ ಬಂಡವಾಳ ಹೂಡಿಕೆ ಉತ್ತೇಜನ ಮಂಡಳಿ (ಎಫ್‌ಐಪಿಬಿ) ಇತ್ಯರ್ಥಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.