ADVERTISEMENT

ಏರ್‌ಸೆಲ್: ತ್ರೀಜಿ ಸೇವೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 16:20 IST
Last Updated 23 ಫೆಬ್ರುವರಿ 2011, 16:20 IST

ಬೆಂಗಳೂರು: ಮಲೇಷ್ಯಾ ಮೂಲದ ಮ್ಯಾಕ್ಸಿಸ್ ಕಮ್ಯುನಿಕೇಷನ್ಸ್ ಬೆರಾಡ್ ಮತ್ತು ಅಪೊಲೊ ಹಾಸ್ಪಿಟಲ್ಸ್ ಸಮೂಹದ ಜಂಟಿ ಮೊಬೈಲ್ ಸೇವಾ ಸಂಸ್ಥೆಯಾಗಿರುವ ಏರ್‌ಸೆಲ್, ಈಗ ಕರ್ನಾಟಕ ವೃತ್ತದಲ್ಲಿಯೂ ಮೂರನೇ ತಲೆಮಾರಿನ ಮೊಬೈಲ್ ಸೇವೆಗೆ (3ಜಿ) ಬುಧವಾರ ಇಲ್ಲಿ ಚಾಲನೆ ನೀಡಿತು.

ದೇಶದ ಒಟ್ಟು 13 ದೂರಸಂಪರ್ಕ ವೃತ್ತಗಳಲ್ಲಿ ‘3ಜಿ’ ಸೇವೆ ಒದಗಿಸಲಿರುವ ಏರ್‌ಸೆಲ್,  ಒಂದು ವಾರದಲ್ಲಿ 11 ವೃತ್ತಗಳಲ್ಲಿ ಈ ಸೇವೆ ಒದಗಿಸಲಿದೆ. ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಗುರ್‌ದೀಪ್ ಸಿಂಗ್, ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಸ್ಥೆಯ ‘3ಜಿ’ ಸೇವೆಯು ಗ್ರಾಹಕರಿಗೆ ತ್ವರಿತ ವೇಗದಲ್ಲಿ ಡಿಜಿಟಲ್ ಅಗತ್ಯಗಳನ್ನು ಪೂರೈಸಲಿದೆ. ಯುವ ಜನಾಂಗ, ಗೃಹಿಣಿಯರು, ವೃತ್ತಿಪರರು, ಮಕ್ಕಳು ಮತ್ತು ವೃದ್ಧರೂ ಸೇರಿದಂತೆ ಎಲ್ಲ ವರ್ಗದವರಿಗೂ ಸೂಕ್ತವಾಗಿದೆ ಎಂದರು. ‘3ಜಿ’ ಚಂದಾದಾರರು ಪರಸ್ಪರ ವಿಡಿಯೊ ಸಂವಾದ ನಡೆಸುವುದು ಈಗ ಸಾಧ್ಯವಾಗಲಿದೆ. ರೈತರು ಕೃಷಿ ತಜ್ಞರ, ಜನಸಾಮಾನ್ಯರು ವೈದ್ಯರ ಸಲಹೆ ಪಡೆಯಲು, ಕುಟುಂಬದ ಸದಸ್ಯರು ಮತ್ತು ಹಿತೈಷಿಗಳ ಮಧ್ಯೆ ಆತ್ಮೀಯ ಸಂವಾದ ಮುಂತಾದವು ಸಾಧ್ಯವಾಗಲಿವೆ ಎಂದರು. ದಿನವೊಂದಕ್ಕೆ 8 ಎಂಬಿ ಬಳಕೆಗೆ ರೂ 7, 3 ದಿನಗಳ 25 ಎಂಬಿಗೆ  ರೂ 22 ಮತ್ತು 30 ದಿನಗಳ 2.5 ಜಿಬಿ ಮಾಹಿತಿ ಬಳಕೆಗೆ  ರೂ 602 ಸೇರಿದಂತೆ ವಿವಿಧ ಶುಲ್ಕಗಳು ವಿವಿಧ ಬಗೆಯ ಬಳಕೆದಾರರ ಅಗತ್ಯಗಳನ್ನು ಒದಗಿಸಲಿದೆ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.