ADVERTISEMENT

ಐಪಿಒ ಮೂಲಕ ₹25,000ಕೋಟಿ ಸಂಗ್ರಹ ಗುರಿ

ಪಿಟಿಐ
Published 26 ಫೆಬ್ರುವರಿ 2018, 19:30 IST
Last Updated 26 ಫೆಬ್ರುವರಿ 2018, 19:30 IST
ಐಪಿಒ ಮೂಲಕ ₹25,000ಕೋಟಿ ಸಂಗ್ರಹ ಗುರಿ
ಐಪಿಒ ಮೂಲಕ ₹25,000ಕೋಟಿ ಸಂಗ್ರಹ ಗುರಿ   

ನವದೆಹಲಿ: ಆರಂಭಿಕ ಸಾರ್ವಜನಿಕ ನೀಡಿಕೆ ಮೂಲಕ 24ಕ್ಕೂ ಹೆಚ್ಚು ಕಂಪನಿಗಳು ಮುಂದಿನ ದಿನಗಳಲ್ಲಿ ₹25,000 ಕೋಟಿ ಸಂಗ್ರಹಿಸುವ ಗುರಿ ಇಟ್ಟುಕೊಂಡಿವೆ.

ಈ ಷೇರುಗಳ ಮಾರಾಟದಿಂದ ಬರುವ ಹಣವನ್ನು ಕಂಪನಿಗಳ ವಿವಿಧ ಕಾರ್ಯಯೋಜನೆಗಳಿಗೆ ಮತ್ತು ಅಭಿವೃದ್ಧಿಗೆ ಬಳಸಲಿವೆ. ಹಲವು ಕಂಪನಿಗಳು ತಮ್ಮ ಮಾರುಕಟ್ಟೆ ವಿಸ್ತಾರ ಹಾಗೂ ಅಭಿವೃದ್ಧಿ ಉದ್ದೇಶಕ್ಕೆ ಆರಂಭಿಕ ಸಾರ್ವಜನಿಕ ನೀಡಿಕೆ ಮೂಲಕ ಷೇರುಪೇಟೆ ಪ್ರವೇಶಿಸುವ ಬಗ್ಗೆ ಸೆಬಿಗೆ ಮಾಹಿತಿ ನೀಡಿವೆ.

ಈ ಮಧ್ಯೆ ಕೆಲವು ಕಂಪನಿಗಳು, ಷೇರುಗಳ ಮೂಲಕ ಸಂಸ್ಥೆಯ ಬ್ರ್ಯಾಂಡ್ ಮೌಲ್ಯ ಹೆಚ್ಚಿಸಿಕೊಂಡು ಪ್ರಸ್ತುತ ಇರುವ ಷೇರುದಾರರಿಗೆ ನಗದು ಒದಗಿಸಲು ಕ್ರಮಕೈಗೊಳ್ಳಲಿವೆ ಎಂದೂ ತಿಳಿದು ಬಂದಿದೆ. ಸೆಬಿ ಅನುಮತಿ ದೊರೆತರೆ ಷೇರುಪೇಟೆಯ ಚಟುವಟಿಕೆಗಳು ಗರಿಗೆದರಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.